Video; ಬೈಕಿನ ಹಿಂದೆ ಕುಳಿತು ಬೇರೆ ಬೈಕಿಗೆ ಒದೆಯಲು ಯತ್ನಿಸಿದ ಸ್ಟೈಲಿಶ್ ಯುವತಿ; ಕ್ಷಣದಲ್ಲಿ ಪಾಠ ಕಲಿಸಿದ ಕರ್ಮ!

ಯಾರದೇ ಆಗಲಿ ಕೇಡು ಬಯಸಿದರೆ ಮೊದಲು ನಮ್ಮದೇ ಕೇಡಾಗುವುದರಲ್ಲಿ ಸಂಶಯವಿಲ್ಲ. ನಾವು ಮಾಡುತ್ತಿರುವ ಪ್ರತಿಯೊಂದು ಕೆಲಸಗಳು ಮೇಲೆ ಕುಳಿತವನು ನೋಟಿಸ್ ಮಾಡುತ್ತಲೇ ಇರುತ್ತಾನೆ. ಅಷ್ಟೇ ಏಕೆ ನೀವು ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಿದರೆ ಅದಕ್ಕೆ ಪ್ರತಿಯಾಗಿ ನಿಮಗೂ ಸಹ ಒಳ್ಳೆಯದೇ ಆಗುತ್ತದೆ. ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡಲು ಬಯಸಿದರೆ ಮೊದಲು ನಮ್ಮದೇ ಕೇಡಾಗುವುದು ನಿಶ್ಚಿತ. ಇದನ್ನೇ ತೋರಿಸುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲಾಗುತ್ತಿದೆ.

ಪ್ರಸ್ತುತ ವಿಡಿಯೋ ನೋಡಿದಾಗ ಮೇಲೆ ಹೇಳಿದ ಮಾತುಗಳು ನೂರಕ್ಕೆ ನೂರು ಪ್ರತಿಶತ ಕರೆಕ್ಟ್ ಆಗಿವೆ ಎಂಬದನ್ನು ಒತ್ತಿ ಹೇಳುತ್ತದೆ. ಕಾರಣ ಇಲ್ಲಿ ಕೆಟ್ಟ ಕರ್ಮದ ಫಲ ಅದಕ್ಕಿಂತಲೂ ಕೆಟ್ಟದ್ದೆ ದೊರಕಿದೆ. ಪ್ರಸ್ತುತ ಇಲ್ಲಿ ತಮಾಷೆಯಾದ ಯುವತಿಯ ಕೃತ್ಯ ನೋಡಿ ಅಷ್ಟೇ ತಮಾಷೆಯ ಪ್ರತಿಕ್ರಿಯೆಗಳನ್ನು ಸಹಿತ ನೆಟ್ಟಿಗರು ವ್ಯಕ್ತ ಮಾಡಿದ್ದಾರೆ. ಯುವತಿಯೊಬ್ಬಳು ಬೈಕ್ ಮೇಲೆ ಹುಡುಗನ ಜೊತೆಗೆ ಹಿಂದೆ ಕುಳಿತು ಹೋಗುತ್ತಿದ್ದಾಳೆ. ಯುವತಿ ತೊಟ್ಟ ಡ್ರೆಸ್ಸಿಂಗ್ ಸೆನ್ಸ್ ತುಂಬಾ ಸ್ಟೈಲಿಶ್ ಆಗಿದೆ. ಆಗ ಆಕೆಯ ತಲೆಯಲ್ಲಿ ಒಮ್ಮೆಲೆ ಅದೇನು ಬರುತ್ತದೆ ಗೊತ್ತಿಲ್ಲ? ಬದಿಯಲ್ಲಿಂದ ಬೈಕ್ ಮೇಲೆ ಹೋಗುತ್ತಿರುವ ಹುಡುಗನ ಬೈಕಿಗೆ ಒದೆಯಲು ಮುಂದಾಗುತ್ತಾಳೆ. ವಿಡಿಯೋದಲ್ಲಿ ಕಂಡು ಬರುವ ಹಾಗೆ ಯುವತಿ ಬದಿಯಲ್ಲಿಯ ಬೈಕ್ ಸವಾರನಿಗೆ ಕೆಳಗೆ ಬೀಳಿಸಲು ಯತ್ನಿಸಿರುವದು ಸ್ಪಷ್ಟವಾಗಿ ಕಂಡು ಬರುತ್ತದೆ.

ಆದರೆ ಇಲ್ಲಿ ನಂತರ ಕಂಡುಬರುವ ದೃಶ್ಯವೇ ಸಂಪೂರ್ಣವಾಗಿ ಬದಲಾಗಿ ಬಿಟ್ಟಿದೆ. ಈ ದೃಶ್ಯ ನಿಮ್ಮನ್ನು ನಗಿಸುವುದರ ಜೊತೆಗೆ ಒಂದು ಒಳ್ಳೆಯ ಪಾಠ ನೀಡುತ್ತದೆ, ಜೊತೆಗೆ ಒಂದು ಒಳ್ಳೆಯ ಸಂದೇಶವನ್ನು ಕಮೆಂಟ್ ರೂಪದಲ್ಲಿ ಬರೆಯಲು ಬದ್ಧ ಮಾಡುತ್ತದೆ. ಯುವತಿ ಬದಿಗಿರುವ ಬೈಕ್ ಸವಾರನಿಗೆ ಕಿಕ್ ನೀಡಲು ಮುಂದಾಗುವಷ್ಟರಲ್ಲಿಯೇ ಬ್ಯಾಲೆನ್ಸ್ ತಪ್ಪಿ ತಾನೇ ಕೆಳಗೆ ಬೀಳುತ್ತಾಳೆ, ಬದಿಯಲ್ಲಿಯ ಬೈಕ್ ಸವಾರ ಮುಂದೆ ಹೋಗಿ ಬಿಡುತ್ತಾನೆ. ವಿಡಿಯೋ ನೋಡಿದ ನೆಟ್ಟಿಗರು, ಕೆಟ್ಟ ಕರ್ಮದ ಫಲ ಕೆಟ್ಟದ್ದೇ ಆಗಿರುತ್ತದೆ, ಅದು ಆದಷ್ಟು ಬೇಗ ರಿಟರ್ನ್ ನಲ್ಲಿ ದೊರೆಯುತ್ತದೆ, ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಕೆಳಗೆ ಬಿದ್ದ ಈ ಹುಡುಗಿಗಾಗಿ ಸಹಾನುಭೂತಿಯನ್ನು ವ್ಯಕ್ತ ಮಾಡಿದ್ದಾರೆ.

ವೀಡಿಯೋ ನೋಡಿ

ಈ ಎಲ್ಲ ದೃಶ್ಯವನ್ನು ಆಕೆಯ ಹಿಂದೆ ಬರುವ ಬೇರೊಬ್ಬ ವ್ಯಕ್ತಿ ವಿಡಿಯೋ ಮಾಡಿದ್ದಾನೆ ಹಾಗೂ ಇಂಟರ್ನೆಟ್ ನಲ್ಲಿ ವೈರಲ್ ಮಾಡಿಬಿಟ್ಟಿದ್ದಾನೆ. ಪ್ರಸ್ತುತ ಈ ವಿಡಿಯೋ ಎಲ್ಲಿಯದು ಎಂದು ಮಾತ್ರ ತಿಳಿದುಬಂದಿಲ್ಲ. ಆದರೆ ನೆಟ್ಟಿಗರಿಗೆ ಮಾತ್ರ ತುಂಬಾ ಇಷ್ಟವಾಗಿದೆ.