“ಕಿತನೆ ತೇಜಸ್ವಿ ಲೋಗ್ ಹೈ ಹಮಾರೆ ದೇಶ್ ಮೆ” ಎನ್ನುವದು ಅಕ್ಷರಶಃ ಸುಳ್ಳಲ್ಲ. ಕಾರಣ ಈ VIDEO ನೋಡಿ ಗೊತ್ತಾಗುತ್ತೆ…
ಈ ವಿಡಿಯೋ ನೋಡಿದಾಗ ಭಾರತದ ಪ್ರಧಾನಿಯವರು ಲೋಕಸಭೆಯ ತಮ್ಮ ಭಾಷಣದಲ್ಲಿ ಒಮ್ಮೆ “ಕಿತನೆ ತೇಜಸ್ವಿ ಲೋಗ್ ಹೈ ಹಮಾರೆ ದೇಶ್ ಮೆ” ಎಂದು ಉಚ್ಚರಿಸಿದ್ದರು. ಆ ಮಾತು 100 ಕ್ಕೆ 100 ರಷ್ಟು ಸತ್ಯವೇ ಎನಿಸುತ್ತದೆ. ಕಾರಣ ಇದೇ ರೀತಿಯ ಒಂದು ವಿಡಿಯೋ ಇಲ್ಲಿ ನೋಡಲಿದ್ದೀರಿ.
ಈ ವಿಡಿಯೋದಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಬೈಕ್ ಮೇಲೆ ಕುಳಿತು ಮೆಟಲ್ ನ ಸುಮಾರು 20 ಅಡಿಗಳಷ್ಟು ಉದ್ದವಾದ 3 ಪೈಪುಗಳನ್ನು ತುಂಬಾ ಲೀಲಾಜಾಲವಾಗಿ ತಾನೊಬ್ಬನೇ ತೆಗೆದುಕೊಂಡು ಹೋಗುತ್ತಿದ್ದಾನೆ. ಅದು ಹೇಗೆ ಅಂತೀರಾ?
ಮೊದಲು ನೋಡಿ ಈ ವಿಡಿಯೋ…
View this post on Instagram
ಸುಮಾರು 20 ಅಡಿಗಳ ಇಷ್ಟೊಂದು ಉದ್ದವಾದ ಪೈಪುಗಳನ್ನು ಎಲ್ಲಿಯೂ ಹಿಡಿಯದೆ ಸರಿಯಾಗಿ ಬ್ಯಾಲೆನ್ಸ್ ಮಾಡಿಕೊಂಡು ತಲೆಯ ಮೇಲಿಟ್ಟು ಅದು ಬೈಕ್ ಮೇಲೆ ತೆಗೆದುಕೊಂಡು ಹೋಗುತ್ತಿದ್ದಾನೆ ಎಂದರೆ ಸುಲಭವಾದದ್ದಲ್ಲ. ಅದಕ್ಕೆ ಈ ವಿಡಿಯೋ ನೋಡಿದಾಗ ಮೋದಿಯವರು ಹೇಳಿದ ಈ ಮೇಲಿನ ಮಾತು ನೆನಪಿಗೆ ಬಾರದೆ ಇರದು.
ಪ್ರಸ್ತುತ ದೃಶ್ಯ ತಮಿಳುನಾಡಿನ ಪೇರಂಬಲೂರು ಜಿಲ್ಲೆಯಲ್ಲಿಯದಿದೆ ಎಂದು ತಿಳಿದು ಬಂದಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 3 ಲಕ್ಷಕ್ಕೂ ಮೀರಿ ಲೈಕ್ಸ್ ಗಳಾಗಿವೆ.