VIDEO; ಫಿಫಾ ವರ್ಲ್ಡ್ ಕಪ್ ಪಂದ್ಯದಲ್ಲಿ ಫುಟ್ಬಾಲ್ ಫ್ಯಾನ್ ಸ್ಟೇಡಿಯಂ ನಲ್ಲಿ ಕುಳಿತೇ ಮಾಡಿದನು ಅದ್ಭುತವಾದ ಗೋಲ್!
ಸದ್ಯ ಜಗತ್ತಿನಾದ್ಯಂತ ಫಿಫಾ ವರ್ಲ್ಡ್ ಕಪ್ ಪಂದ್ಯಾವಳಿಯ ಜ್ವರ ಏರಿದೆ. ಪಂದ್ಯಗಳಲ್ಲಿಯ ರೋಚಕ ಫಲಿತಾಂಶಗಳು ಈ ಆಟಕ್ಕೆ ಇನ್ನಷ್ಟು ರೋಮಾಂಚನಗೊಳಿಸುತ್ತಿವೆ. ಈ ಮಧ್ಯೆ ಫುಟ್ಬಾಲ್ ಪಂದ್ಯ ನಡೆದ ಸ್ಟೇಡಿಯಂ ನಿಂದ ಮೋಜಿನ ಪ್ರಸಂಗದ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸ್ಟೇಡಿಯಂ ನಲ್ಲಿ ಕುಳಿತ ವ್ಯಕ್ತಿಯೊಬ್ಬ ಕಾಗದದ ವಿಮಾನವನ್ನು ತಯಾರಿಸಿ ಅದನ್ನು ಪಂದ್ಯ ನಡೆದಿರುವಾಗಲೇ ಆಟದ ಮೈದಾನದಲ್ಲಿಯೇ ತೇಲಿ ಬಿಟ್ಟಿದ್ದಾನೆ. ಆ ಕಾಗದದ ವಿಮಾನ ನಿಧಾನವಾಗಿ ಗಾಳಿಯಲ್ಲಿ ತೇಲಾಡುತ್ತ ತೆಲಾಡುತ್ತ ಕೆಲವು ಕ್ಷಣಗಳವರೆಗೆ ಅವಕಾಶದಲ್ಲಿ ಸುತ್ತಾಡುತ್ತಿದೆ. ನಂತರ ಮಾತ್ರ ಅದರ ಒಂದು ಅದ್ಭುತ ದೃಶ್ಯ ಅಲ್ಲಿ ಕಾಣ ಸಿಗುತ್ತದೆ. ಅದೇನೆಂದರೆ, ಯಾರು ಎಂದಿಗೂ ಆಶಿಸಲಾರದ ಅಪರೂಪದ ದೃಶ್ಯ ಅಲ್ಲಿ ನಡೆದು ಹೋಗುತ್ತದೆ.
ಅದು ಯಾವ ದೃಶ್ಯ ನೋಡಿ ವಿಡಿಯೋದಲ್ಲಿ…
View this post on Instagram
ಪ್ರಸ್ತುತ ವಿಡಿಯೋದಲ್ಲಿ ಹುಡುಗ ತೇಲಿಬಿಟ್ಟ ಈ ಕಾಗದದ ವಿಮಾನ ಕೆಲಹೊತ್ತು ಮೈದಾನದಲ್ಲಿ ಸಂಚರಿಸಿ ನಂತರ ನೇರ ಗೋಲ್ ಪೋಸ್ಟ್ ನೊಳಗೆ ಧುಮುಕಿದೆ. ಈ ಅಪರೂಪದ ದೃಶ್ಯ ನೋಡಿ ಸ್ಟೇಡಿಯಂ ನಲ್ಲಿ ಕುಳಿತು ಈ ಆಟವನ್ನಾಡಿದ ಎಲ್ಲರಿಗೂ ತುಂಬಾ ಖುಷಿಯೋ ಖುಷಿ.
ಪ್ರಸ್ತುತ ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಮೋಜು ಎಂದೆನಿಸಿದೆ.