Video: ತನ್ನ ಮಾಲೀಕನು ಕಾಲಿಗೆ ಗಾಯವಾಗಿ ಕುಂಟಾಗಿ ನಡೆಯುತ್ತಿರುವದನ್ನು ಕಂಡು ಈ ನಾಯಿ ಮಾಡಿದ್ದೇನು ನೋಡಿ ವೀಡಿಯೋದಲ್ಲಿ!!
ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಸಾಕು ಪ್ರಾಣಿ ನಾಯಿ ಮತ್ತು ಮಾಲೀಕನ ನಡುವಿನ ವೀಡಿಯೋ ಇದೆ.
ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ನಾಯಿ ತನ್ನ ಮಾಲೀಕನು ಕಾಲಿಗೆ ಗಾಯವಾಗಿ ಒಂದು ಕಾಲಿನ ಮೇಲೆ ನಡೆಯುತ್ತಿರುತ್ತಾನೆ. ಮಾಲೀಕನು ಕುಂಟಾಗಿ ನಡೆಯುತ್ತಿರುವುದನ್ನು ಕಂಡು ನಾಯಿ ಸಹ ಕುಂಟಾಗಿ ನಡೆಯುವ ಪ್ರಯತ್ನ ಮಾಡುತ್ತದೆ. ಈ ನಾಯಿ ತುಂಬಾನೇ ಬುದ್ಧಿವಂತ ಅನ್ಸುತ್ತೆ ಏಕೆಂದರೆ ಮಾಲೀಕನು ಒಂದೇ ಕಾಲಿನ ಮೇಲೆ ನಡೆಯುತ್ತಿರುವುದನ್ನು ಕಂಡು ಈ ನಾಯಿ ಸಹ ಮಾಲೀಕನ ಮುಂದೆ ಒಂದು ಕಾಲು ಮೆಲಕ್ಕೆ ಎತ್ತಿ ನಡೆಯುತ್ತದೆ. ಅಷ್ಟೇ ಅಲ್ಲದೆ ಅದೇ ಪ್ರಕಾರವಾಗಿ ಮಾಲಿಕನ ಸುತ್ತುತ್ತದೆ. ನಾಯಿ ಮಾಲೀಕನ ಎದುರು ಕುಂಟಾಗಿ ನಡೆದು ಚೇಷ್ಟೆ ಮಾಡುತ್ತದೆ. ಇದನ್ನು ಕಂಡು ಮಾಲೀಕನು ಬೇಸರ ಪಡುತ್ತಾನೆ. ಏಕೆಂದರೆ ನಾಯಿ ಸಹ ನಾನು ಕುಂಟಾಗಿ ನಡೆಯುತ್ತಿರುವುದನ್ನು ಕಂಡು ಹಾಗೇನೇ ನಡೆಯುತ್ತಿದೆ ಎಂದುಕೊಂಡು ಮನದಲ್ಲಿ ಬೇಸರ ಪಡುತ್ತಾನೆ. ಪ್ರಸ್ತುತ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ
ವೀಡಿಯೋ ನೋಡಿ.
https://twitter.com/Yoda4ever/status/1596467553215258629?t=pF1VsfzjVMk9O-Jffr_u-A&s=19
ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಟ್ವಿಟರ್ ನಲ್ಲಿ yog ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ ಇದುವರೆಗೆ ಈ ವಿಡಿಯೋವನ್ನು ಸುಮಾರು ಎರಡು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ