Video; ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿರುವ ಬೈಕ್ ಸವಾರರ ಮುಂದೆಯೇ ರೆಡ್ ಸೀರೆ ತೊಟ್ಟು ಮಾಡಿದ ಯುವತಿಯ ಸಖತ್ ಡ್ಯಾನ್ಸ್ ವೈರಲ್..!
ಜನ ರೀಲ್ ಗಾಗಿ ಏನೇನು ಮಾಡುತ್ತಾರೋ ಯಾವ ಯಾವ ಹಂತಕ್ಕೆ ಹೋಗುತ್ತಾರೋ ಗೊತ್ತಿಲ್ಲ. ಸದ್ಯ ಯುವತಿಯೊಬ್ಬಳ ಡಾನ್ಸ್ ನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಈ ಆಂಟಿ ಟ್ರಾಫಿಕ್ ನಲ್ಲಿ ಅದೂ ಟ್ರಾಫಿಕ್ ಪೊಲೀಸನ ಮುಂದೆಯೇ ರಸ್ತೆಯ ಮೇಲೆ ಡಾನ್ಸ್ ಶುರು ಮಾಡಬೇಕಾ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮುಖ್ಯ ಕಂಟೆಂಟ್ ಎಂದರೆ ಡಾನ್ಸ್. ಈ ಡಾನ್ಸ್ ಎಲ್ಲ ವಯಸ್ಸಿನವರಿಗೂ ಆಕರ್ಷಿಸುತ್ತದೆ. ಅದರಲ್ಲೂ ಹುಡುಗಿಯರು ಅಥವಾ ಆಂಟಿಯರು ಮಾಡಿದ ಡಾನ್ಸ್ ಎಂದಾಗ ಕೇಳಬೇಕೇ? ಸದ್ಯ ಇಲ್ಲಿ ನೋಡಲಿರುವ ಡಾನ್ಸಿನ ವಿಡಿಯೋ ಸಹ ತುಂಬಾ ವಿಶೇಷವಾಗಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯ ಮೇಲೆಯೇ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುತ್ತಾ ಡಾನ್ಸ್ ಮಾಡಿದ್ದಾಳೆ. ಮೊದಮೊದಲು ರಸ್ತೆ ಮೇಲಿಂದ ಸುಮ್ಮನೆ ನಡೆದುಕೊಂಡು ಸಾಮಾನ್ಯವಾಗಿ ಬರುವ ಯುವತಿ ನಂತರ ಕೆಲವೊಂದು ಚಿಕ್ಕಪುಟ್ಟ ಆಕ್ಟಿಂಗ್ ಮಾಡುತ್ತಾಳೆ. ಹಾಡಿನ ವೇಗ, ಮೋಶನ್ ಹೆಚ್ಚಾದ ನಂತರ ಈ ಯುವತಿ ಒಮ್ಮೆಲೇ ತನ್ನ ಗೇರ್ ಬದಲಾಯಿಸಿ ರಸ್ತೆಯ ಮಧ್ಯದಲ್ಲಿಯೇ ವೇಗದಲ್ಲಿ ಹೆಜ್ಜೆ ಹಾಕಿ ಡಾನ್ಸ್ ಮಾಡಲು ಶುರು ಮಾಡಿ ಬಿಡುತ್ತಾಳೆ. ಸರ್ಕಲ್ ನಲ್ಲಿ ನಿಂತ ಬೈಕ್ ಸವಾರರು ಅತ್ತ ಗ್ರೀನ್ ಸಿಗ್ನಲ್ ನೋಡಬೇಕೊ ಅಥವಾ ಇತ್ತ ರೆಡ್ ಸೀರೆಯನ್ನು ತೊಟ್ಟು ಡಾನ್ಸ್ ಮಾಡುತ್ತಿರುವ ಯುವತಿಯನ್ನು ನೋಡಬೇಕೊ ಒಂದು ತಿಳಿಯದೆ ಪರದಾಡಿದ್ದಾರೆ.
ನೋಡಿ ಯುವತಿಯ ವಿಡಿಯೋ…
View this post on Instagram
ಪ್ರಸ್ತುತ ಈ ಯುವತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ hemasharma973 ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷ ಲಕ್ಷ ಜನರು ವೀಕ್ಷಿಸಿದ್ದಾರೆ. ಮತ್ತು ಸಾವಿರಾರು ಜನರು ಪ್ರಸ್ತುತ ವಿಡಿಯೋವನ್ನು ಲೈಕ್ ಮಾಡಿದ್ದಾರೆ.