ನೀರಿನ ಮೇಲೆ ತೇಲುತ್ತ ವೇಗದಲ್ಲಿ ಸಂಚರಿಸುತ್ತಿರುವ ವ್ಯಕ್ತಿಯ ಫನ್ನಿ VIDEO; ಗ್ರ್ಯಾವಿಟಿ ಫೋರ್ಸ್ ಗೆ ನೇರ ಚಾಲೆಂಜ್?

ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ವಿಚಿತ್ರ ವಿಡಿಯೋಗಳು ಆಗಾಗ ವೈರಲ್ ಆಗುತ್ತವೆ. ಈ ವಿಡಿಯೋಗಳು ಸಹಜವಾಗಿ ನೋಡಿದಾಗ ಕೆಲವೊಮ್ಮೆ ಸಖತ್ ಕನ್ಫ್ಯೂಷನ್ ನಿರ್ಮಾಣ ಮಾಡುತ್ತವೆ. ಯಾವಾಗ ಸಂಪೂರ್ಣವಾಗಿ ಗಮನವಿಟ್ಟು ಕಣ್ಣುಗಳನ್ನು ಅಗಲಿಸಿ ನೋಡುತ್ತೇವೆಯೋ ಆಗ ಗೊತ್ತಾಗುತ್ತದೆ ಸತ್ಯಾಂಶ.

ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ ಈ ವಿಡಿಯೋ ನೋಡಿದಾಗ ಇದನ್ನು ನಂಬುವುದೇ ಕಷ್ಟವಾಗಿ ಬಿಡುತ್ತದೆ. ಕಾರಣ ಈ ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿ ನೆಟ್ಟಿಗರ ಗಮನವನ್ನು ತನ್ನ ಕಡೆ ಸೆಳೆದಿದ್ದಾನೆ. ಇಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ವ್ಯಕ್ತಿ ನೀರಿನ ಮೇಲೆ ಕುಳಿತು ಸಂಚರಿಸುತ್ತಿರುವ ಹಾಗೆ ಕಂಡು ಬರುತ್ತಿದೆ. ಆತ ಕುಳಿತಲ್ಲಿಯೇ ವೇಗವಾಗಿ ಮುನ್ನುಗ್ಗುತ್ತಿದ್ದಾನೆ ಎಂಬಂತೆ ಸ್ಪಷ್ಟವಾಗಿ ಭಾಸವಾಗುತ್ತದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾದ ಯೂಸರ್ಸ್ ಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಇದರ ಹಿಂದೆ ಯಾವ ರಹಸ್ಯ ಅಡಗಿದೆ, ಪ್ರಸ್ತುತ ವ್ಯಕ್ತಿ ಯಾವುದೇ ವಸ್ತುವಿನ ಸಹಾಯವಿಲ್ಲದೆ ಅದು ಹೇಗೆ ನೀರಿನಲ್ಲಿ ತೇಲುತ್ತಾ ಮುಂದುವರಿಯುತ್ತಿದ್ದಾನೆ ಎಂಬ ಪ್ರಶ್ನೆ ನೋಡುಗನಿಗೆ ಹುಟ್ಟುತ್ತದೆ. ಇದರ ಉತ್ತರ ತಿಳಿಯುವ ಮುನ್ನ ನೆಟ್ಟಿಗ ಮಾತ್ರ ಮೊದಲು ಫುಲ್ ಕನ್ಫ್ಯೂಸ್ ಆಗುವುದು ಗ್ಯಾರಂಟಿ.

ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿ ಕುಳಿತಲ್ಲಿಯೇ ತುಂಬಾ ಹವ್ಯಾಸದಿಂದ ಸಿಗರೇಟ್ ಬೇರೆ ಸೇದುತ್ತಿದ್ದಾನೆ. ವ್ಯಕ್ತಿಯ ಕೈಯಲ್ಲಿ ಮೀನು ಹಿಡಿಯುವ ಜಾಳಿಗೆಯೊಂದು ಇದೆ. ವಿಡಿಯೋದಲ್ಲಿ ವ್ಯಕ್ತಿಯು ಗ್ರ್ಯಾವಿಟಿಗೆ ಚಾಲೆಂಜ್ ನೀಡುವ ತರ ಕಂಡುಬರುತ್ತದೆ. ಕೆಲವೇ ಕ್ಷಣಗಳ ನಂತರ ಅಲ್ಲಿಂದ ಎದ್ದು ಯಾವಾಗ ಮೀನು ಹಿಡಿಯಲು ಓಡುತ್ತಾನೆ ಆಗ ಗೊತ್ತಾಗುತ್ತದೆ ಈ ದೃಶ್ಯದ ಹಿಂದಿನ ಸಂಪೂರ್ಣ ಸತ್ಯ.

ನೋಡಿ ಈ ತಮಾಷೆಯ ಕನ್ಫ್ಯೂಸ್ ವಿಡಿಯೋ…

https://twitter.com/ConfusedImage/status/1559129619252785152?ref_src=twsrc%5Etfw%7Ctwcamp%5Etweetembed%7Ctwterm%5E1559129619252785152%7Ctwgr%5E91880362cbe009bf89d6828b09aaa41dd923f65f%7Ctwcon%5Es1_c10&ref_url=https%3A%2F%2Fd-30234947432410300266.ampproject.net%2F2211182146000%2Fframe.html

ಈ ಕನ್ಫ್ಯೂಷನ್ ನಿರ್ಮಾಣ ಮಾಡುವ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ Confusing Perspective ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ವಿಡಿಯೋದ ಕ್ಯಾಪ್ಷನ್ ನಲ್ಲಿ ನೋಡಿ ಈ ವ್ಯಕ್ತಿ ನೀರಿನಲ್ಲಿ ಎಷ್ಟೊಂದು ವೇಗವಾಗಿ ಸಂಚರಿಸುತ್ತಿದ್ದಾನೆ ಎಂದಿದ್ದಾರೆ.