Video; ಮನುಷ್ಯರ ನಾಗಿನ್ ಡಾನ್ಸ್ ಬಿಡಿ? ಖುದ್ದು ನಾಗರಾಜನೇ ಬಳ್ಳಿಗೆ ಜೋತುಬಿದ್ದು ನೀರಿನ ಮೇಲೆ ಮಾಡಿದ ಒರಿಜಿನಲ್ ಡಾನ್ಸ್ ನೋಡಿ.

ಹಾವಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ವೈರಲ್ ಆಗುತ್ತವೆ. ಎಷ್ಟೇ ವೀಡಿಯೊಗಳನ್ನು ನೋಡಿದರೂ ನೆಟ್ಟಿಗರಿಗೆ ಹಾವಿನ ಬಗ್ಗೆ ವಿವಿಧ ಕೂತೂಹಲ ಇದ್ದೆ ಇರುತ್ತೆ. ಇನ್ನೂ ಏನಾದರೂ ಹೊಸದು ಇರುತ್ತದೆಯೇ ಎಂಬ ಪ್ರಶ್ನೆಯನ್ನು ಹೊತ್ತು ನೋಡುತ್ತಾರೆ. ಸದ್ಯ ಈ ವೇಳೆ ಬೇರೆಯೇ ವಿಡಿಯೋ ಒಂದನ್ನು ನಿಮಗಾಗಿ ತಂದಿದ್ದೇವೆ.

ಈ ವಿಡಿಯೋದಲ್ಲಿ ನಾಗರಹಾವು ನೀರಿನ ಮೇಲೆ ಜೋತು ಬಿದ್ದು ಗರಗರನೆ ತಿರುಗುತ್ತಿದೆ. ಬಹುಶಃ ಹಾವು ಗಿಡದ ಮೇಲೆ ಹತ್ತಿ ನಂತರ ರೆಂಬೆಯಿಂದ ತುದಿಗೆ ಬಂದು ನೇತಾಡುತ್ತಿದೆ. ಈ ಸಮಯದಲ್ಲಿ ಉದ್ದವಾಗಿ ಕಾಣಿಸುತ್ತಿರುವ ಈ ಹಾವು ಮರದ ಮೇಲೆ ಹಬ್ಬಿದ ಬಳ್ಳಿಯ ಆಶ್ರಯವನ್ನು ತೆಗೆದುಕೊಂಡು ಸಾಲಿಡ್ ಬ್ಯಾಲೆನ್ಸ್ ನಲ್ಲಿ ಗರಗರನೆ ಸುತ್ತಿ ಮಾಡುತ್ತಿರುವ ಡಾನ್ಸ್ ಅಮೋಘವಾಗಿದೆ. ಈ ದೃಶ್ಯ ನೋಡಲು ತುಂಬಾ ವಿಶೇಷವಾಗಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Abul Hasan (@abulhasan3502)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ‘abulhasan3502’ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ನೆಟ್ಟಿಗರು ನೋಡಿ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.