Video; ಆಂಟಿ ಆಟ; ಇಲ್ದೆ ಇರೋದನ್ನ ಮಾಡಲಿಕ್ಕೆ ಹೋದಳು, ಆಕಾಶದಿಂದ ಧರೆಗಿಳಿದ ರಂಭೆ; ಇವಳೇ ಮುರಿದೋದ ಗೊಂಬೆ…

ಸೋಶಿಯಲ್ ಮೀಡಿಯಾ ಹುಚ್ಚಿನಿಂದಾಗಿ ಜನರು ತರತರದ ಆಕ್ಟಿವಿಟೀಸ್ ಗಳನ್ನು, ಪ್ರಯೋಗಗಳನ್ನು ಮಾಡಲು ಹೋಗುತ್ತಿದ್ದಾರೆ. ಇದರಲ್ಲಿ ಹುಡುಗರು, ಯುವಕರಂತೆ ನಾವೇನು ಕಮ್ಮಿಯೇ ಎಂದು ಹುಡುಗಿಯರು, ಯುವತಿಯರು ಸಹ ಭಾರಿ ಪೈಪೋಟಿಯಲ್ಲಿ ಇಳಿದಿದ್ದಾರೆ. ಎಲ್ಲರೂ ಈ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯನ್ನು ಪಡೆಯಲು ಹಾತೊರೆಯುತ್ತಿದ್ದಾರೆ. ಇದಕ್ಕಾಗಿ ಕೆಲವೊಮ್ಮೆ ಇಂಥ ಜನರು ತಮ್ಮ ಜೀವವನ್ನು ಸಹ ಕಷ್ಟದಲ್ಲಿ ಸಿಲುಕಿಸುತ್ತಾರೆ. ಈ ರೀತಿಯ ಅನೇಕ ವಿಡಿಯೋಗಳು ದಿನನಿತ್ಯ ನಮ್ಮ ಕಣ್ಣುಗಳ ಮುಂದೆ ಹರಿದು ಹೋಗುತ್ತವೆ. ಆದರೂ ತಮ್ಮ ಚಾಳಿಯನ್ನು ಬಿಡದೆ ಅದೇ ರೀತಿಯಲ್ಲಿ ಮುಂದುವರಿಸುತ್ತಾರೆ.

ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಸಹ ಇದೇ ರೀತಿಯ ವಿಷಯಕ್ಕೆ ಸಂಬಂಧಿಸಿದ ಒಳ್ಳೆಯ ಉದಾಹರಣೆಯಾಗಿದೆ. ಇಲ್ಲಿ ಆಂಟಿಯು ಮನದಲ್ಲಿ ಏನಾದರೂ ಹೊಸದನ್ನು ಮಾಡುವ ಉದ್ದೇಶದಿಂದ ಪ್ರಯತ್ನ ಪಟ್ಟಿದ್ದಾಳೆ. ಆದರೆ ಈ ಪ್ರಯತ್ನ ಸಂಪೂರ್ಣವಾಗಿ ಫೇಲಾಗಿಬಿಟ್ಟಿದೆ. ಜೊತೆಗೆ ಕೊನೆಯಲ್ಲಿ ಹೇಗಾದರೂ ಬದುಕಿದೆಯಾ ಬಡಜೀವವೆ ಎನ್ನುವಂತಾಗಿದೆ.

ಸ್ಲೋ ಮೋಷನ್ ಸೃಷ್ಟಿಸಿತು ಆವಾಂತರ.

ಯುವತಿಯೊಬ್ಬಳ ಇಕ್ಕಟ್ಟಾದ ಸ್ಥಳದಲ್ಲಿ ಮೆಟ್ಟಿಲು ಇಳಿಯುವ ಸೀನ್ ನ ವಿಡಿಯೋ ರೆಕಾರ್ಡ್ ಮಾಡಬೇಕಾಗಿತ್ತು ಅದು ಸ್ಟೈಲಿಷ್ ಆಗಿ. ಈ ಸಂದರ್ಭದಲ್ಲಿ ಆಂಟಿ ತುಂಬಾ ಸಾವಕಾಶವಾಗಿ ಅಂದರೆ ಒಟ್ಟಿನಲ್ಲಿ ‘ಸ್ಲೋ ಮೋಷನ್’ ಫಿಲ್ಮಿ ಸ್ಟೈಲ್ ನಲ್ಲಿ ಇಳಿಯುವಂತೆ ಮಾಡುವವಳಿದ್ದಳು. ಆದರೆ ಪಾಪ ಯಾಕೋ ಅದೃಷ್ಟ ಸರಿ ಇರಲಿಲ್ಲ ಅಂತ ಕಾಣುತ್ತೆ, ಸ್ಲೋ ಮೋಷನ್ ನಲ್ಲಿ ಸ್ಟೈಲಿಷ್ ಆಗಿ ರಭೆಯಂತೆ ಆಂಟಿ ಇಳಿಯುತ್ತಿರುವಾಗ ಹಠಾತ್ ಕಾಲು ಜಾರಿ ಆಂಟಿ ಒಮ್ಮೆಲೆ ಧರೆಯಲ್ಲಿಯೇ ಇಳಿದು ಡಮಾರ್ ಎಂದು ಬೀಳಬೇಕೆ? ವಿಡಿಯೋ ಮಾಡಿಕೊಳ್ಳುತ್ತಿದ್ದ ವ್ಯಕ್ತಿ (ಬಹುಶಃ ಗಂಡ) ಹೌಹಾರಿ ವೇಗದಲ್ಲಿ ಆಂಟಿಯ ಕಡೆಗೆ ಓಡುತ್ತಾನೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಆತನ ಕೆಲಸದ ಪ್ರತಿ ಇದ್ದ ಪ್ರಾಮಾಣಿಕತೆ ನೋಡಿ ಮೊಬೈಲ್ ಶೂಟ್ ಮಾಡುವದನ್ನು ನಿಲ್ಲಿಸೇ ಇಲ್ಲ. ಹೀಗಾಗಿ ಇದೆಲ್ಲವೂ ಮೊಬೈಲ್ ನಲ್ಲಿ ಶೂಟ್ ಆಗಿದೆ.

ನೀವು ನೋಡಿ ಈ ವಿಡಿಯೋ…

 

View this post on Instagram

 

A post shared by Shadow kannadiga (@shadow.kannadiga)

ಪ್ರಸ್ತುತ ಈ ಆಂಟಿಯ ಸಖತ್ ತಮಾಷೆಯ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶಾಡೋ ಕನ್ನಡಿಗ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1.7 ಮಿಲಿಯನ್ ವೀಕ್ಷಣೆಯನ್ನು ಪಡಿದಿದೆ. ಮತ್ತು ಈ ವಿಡಿಯೋಗೆ ಸಾವಿರಾರು ಜನರು ಲೈಕ್ ಸಹ ಮಾಡಿದ್ದಾರೆ.

ಇನ್ನು ಪ್ರತಿಕ್ರಿಯೆಗಳ ಬಗ್ಗೆ ಹೇಳುವದಾದರೆ, ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ಸಖತ್ ತಮಾಷೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಯೂಸರ್ ಅಯ್ಯೋ ಎಲ್ಲ ಉಜ್ಜಿ ಹೋಯಿತು ಎಂದರೆ, ಇನ್ನೊಬ್ಬ ಯೂಸರ್, ಆಂಟಿ ಇಲ್ದೇ ಇರೋ ಪೋಸ್ ಕೊಡೋಕೆ ಹೋದ್ರೆ ಹೀಗೆ ಆಗೋದು, ಎಂದಿದ್ದಾನೆ. ಇನ್ನೊಬ್ಬ ತುಂಟ ಆಂಟಿ ಲಗೇಜು ಫುಲ್ ಡ್ಯಾಮೇಜ್ ಎಂದಿದ್ದಾನೆ..