Video; ತುಂಬ ಸಿನ್ಸಿಯರ್ ಡ್ಯಾನ್ಸ್, ಕ್ಷಣದಲ್ಲಿಯೇ ಧಮಾಕದಲ್ಲಿ ಬದಲಾಯಿಸಿದ್ದು ಗೊತ್ತೇ ಆಗ್ಲಿಲ್ಲ ಆಂಟಿಯ ಈ ಡಾನ್ಸ್..!

ಸೋಶಿಯಲ್ ಮೀಡಿಯಾ ಅಂದರೆ ವೈರಲ್ ವಿಡಿಯೋಗಳ ದೊಡ್ಡ ವೇದಿಕೆ. ಇಲ್ಲಿ ನೇಟಿಜನ್ಸ್ ಗಳಿಗೆ ಯಾವ ವಿಡಿಯೋ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏನಾದರೂ ಒಂದು ಕಾರಣದಿಂದ ದಿನಂಪ್ರತಿ ಯಾವುದಾದರೂ ಒಂದು ವಿಡಿಯೋ ವೈರಲ್ ಆಗುತ್ತದೆ. ಕೆಲವೊಂದು ವಿಡಿಯೋಗಳು ಹುಡುಗರಿಗೆ ಆನಂದ, ಸಂತೋಷ ನೀಡಿದರೆ ಇನ್ನು ಕೆಲವು ವಿಡಿಯೋಗಳು ತಮಾಷೆಯಿಂದ ಕೂಡಿರುತ್ತದೆ. ಕೆಲವು ವಿಡಿಯೋಗಳನ್ನಂತೂ ನೋಡಿದಾಗ ಕೋಪ ತಾರಕಕ್ಕೇರುತ್ತದೆ. ಇನ್ನು ಕೆಲವು ವಿಡಿಯೋಗಳು ಜೀವನ ಜೀವಿಸುವ ನಿಜವಾದ ಪಾಠವನ್ನು ಸಹ ಹೇಳಿಕೊಡುತ್ತವೆ.

ಕಲೆ ಯಾರ ಸ್ವತ್ತೂ ಇಲ್ಲ. ಒಂದು ವೇಳೆ ನಿಮ್ಮಲ್ಲಿ ಅದ್ಭುತವಾದ ಕಲೆ ಏನಾದರೂ ಇದ್ದರೆ ಸಾಕು ಸೋಶಿಯಲ್ ಮೀಡಿಯಾ ಮುಖಾಂತರ ಕ್ಷಣದಲ್ಲೇ ಎಲ್ಲರಿಗೂ ಪರಿಚಯವಾಗಿ ಬಿಡುತ್ತೀರಿ. ಅದಕ್ಕೆ ಕಾರಣ ಇಂಟರ್ನೆಟ್ ಜಗತ್ತಿನಲ್ಲಿರುವ ವಿವಿಧ ಪ್ಲಾಟ್ ಫಾರ್ಮ್ ಗಳು. ಇಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ.

ಇದರಿಂದಲೇ ಅನೇಕರು ಯಾವುದೇ ರೀತಿಯ ಗಾಡ್ ಫಾದರ್ ಇಲ್ಲದೆ ಫೋಕಸ್ ನಲ್ಲಿ ಬಂದಿದ್ದಾರೆ. ಅದರಲ್ಲೂ ಇರುವ ಅನೇಕ ಕಲೆಗಳಲ್ಲಿ ನಿಮಗೆ ಡಾನ್ಸ್ ಬರುತ್ತಿದ್ದರೆ ನೀವು ಬಹುಬೇಗ ಫೇಮಸ್ ಆಗುತ್ತೀರಿ. ಕಾರಣ ಸೋಶಿಯಲ್ ಮೀಡಿಯಾದಲ್ಲಿ ನೃತ್ಯವನ್ನು ತುಂಬಾ ಇಷ್ಟಪಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಮಾಡಿದ ತುಂಬಾ ಸಿಂಪಲ್ ಡ್ಯಾನ್ಸ್ ಒಮ್ಮೆಲೆ ಧಮಾಕಾ ದಲ್ಲಿ ಬದಲಾಗಿ ಈಗ ಫುಲ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ನಸುಗೆಂಪು ಬಣ್ಣದ ಸೀರೆಯನ್ನುಟ್ಟು ಯುವತಿ ಮೊದಲ ಹಂತದಲ್ಲಿ ತುಂಬಾ ಸಿನ್ಸಿಯರ್ ಆಗಿ ಅಷ್ಟೆ ನಿಧಾನಗತಿಯಲ್ಲಿ ನೃತ್ಯ ಶುರುಮಾಡುತ್ತಾಳೆ. ಸಂಗೀತ ಹೇಗೆ ತನ್ನ ವರಸೆ ಬದಲಾಯಿಸುತ್ತದೆ ಹಾಗೆ ಮಹಿಳೆಯೂ ಸಹ ಒಮ್ಮೆಲೇ ತನ್ನ ವರಸೆಯನ್ನು ಬದಲಾಯಿಸಿ ಫುಲ್ ಧಮಾಕದಿಂದ ಡಾನ್ಸ್ ಹೊಡೆಯಲು ಶುರು ಮಾಡಿದಾಗ ನೋಡುಗರು ಒಮ್ಮೆಲೇ ಸ್ಟ್ಯಾಚು ಆಗಿ ಬಿಡುತ್ತಾರೆ. ಒಂದೊಂದು ಸ್ಟೆಪ್ಸ್ ಗಳು ಯುವತಿ ತುಂಬಾ ಅದ್ಭುತವಾಗಿ ಅಷ್ಟೇ ಲೀಲಾಜಾಲವಾಗಿ ಎಂಜಾಯ್ ಮಾಡುತ್ತಾ ಕುಣಿದು ಕುಪ್ಪಳಿಸಿದ್ದಾಳೆ. ಈ ಸಂದರ್ಭದಲ್ಲಿ ಯುವತಿಯು ತುಂಬಾ ಮುಕ್ತವಾಗಿ ಸಂಚಲನ ಮಾಡಿದ್ದಾಳೆ. ಮತ್ತು ಕಾರ್ಯಕ್ರಮದಲ್ಲಿ ನೆರೆದವರ ದೇಹದಲ್ಲಿಯೂ ಸಂಚಲನ ಮೂಡಿಸಿದ್ದಾಳೆ.

ನೋಡಿ ಈ ಸೂಪರ್ ವಿಡಿಯೋ

ಯುವತಿ ಮಾಡಿದ ಒಳ್ಳೆಯ ಪರ್ಫಾರ್ಮೆನ್ಸ್ ನಿಂದ ಕೂಡಿದ ಈ ಕುಣಿತದ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ “ಪಿಕೋಲೊ ವೆಡ್ಡಿಂಗ್ಸ್” ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ಸೂಪರ್ ವಿಡಿಯೋ ಇಲ್ಲಿಯವರೆಗೆ 4.4 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಲಕ್ಷಾವಧಿ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಕಮೆಂಟ್ ಬಾಕ್ಸ್ ನಲ್ಲಿ ನೆಟ್ಟಿಗರು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಯೂಸರ್ ಈ ಡಾನ್ಸ್ ನೋಡಿ “ಫ್ಯಾಬುಲಸ್” ಎಂದಿದ್ದಾನೆ. ಇನ್ನೊಬ್ಬ ನೆಟ್ಟಿಗ “ಸೀರೆ ಆಕೆಯ ಕುಣಿತವನ್ನು ನಿಲ್ಲಿಸಲು ಸಾಧ್ಯವಿಲ್ಲ” ಎಂದಿದ್ದಾನೆ.