ಕಾರ್ಮಿಕ ಕಾರ್ಡ್ ಇದ್ದವರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ಇಲಾಖೆ ವತಿಯಿಂದ ಸಿಹಿ ಸುದ್ದಿ, 60000ರೂ ಉಚಿತ…

ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಎನ್ನುವ ಒಂದು ದಾಖಲೆ ನೀಡುತ್ತಿದೆ. ಈ ಕಾರ್ಡ್ ಹೊಂದಿರುವವರು ಸರ್ಕಾರದಿಂದ ಅನೇಕ ಸಹಾಯವನ್ನು ಪಡೆಯಬಹುದು. ಅದರಂತೆ ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇದ್ದವರು ತಮ್ಮ ಮಕ್ಕಳ ಮದುವೆಗೆ 60,000 ಸಹಾಯಧನವನ್ನು ಪಡೆಯಬಹುದು. ಯಾವುದೇ ಕಾರ್ಮಿಕ ಕಾರ್ಡ್ ಹೊಂದಿರುವ ವ್ಯಕ್ತಿಯು ತನ್ನ ಇಬ್ಬರು ಮಕ್ಕಳುಗಳಿಗೆ ಅದು ಹೆಣ್ಣಾಗಲಿ ಅಥವಾ ಗಂಡು ಮಗನಾಗಿದ್ದರು ತಲಾ 60,000 ರೂಗಳನ್ನು ಈ ಯೋಜನೆಯಿಂದ ಪಡೆಯಬಹುದು. ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಇರುವ ಅನೇಕ ಅನುಕೂಲತೆಗಳ ಜೊತೆಗೆ ಇದು ಕೂಡ ಒಂದು ಈ ರೀತಿ ಮದುವೆಗೆ ಸಹಾಯಧನ ಪಡೆಯಲು ನೀವು ಆನ್ಲೈನ್ ಅಲ್ಲಿ ಅಪ್ಲಿಕೇಶನ್ ಹಾಕಬೇಕಾಗುತ್ತದೆ. ಇದಕ್ಕಿರುವ ನಿಯಮಗಳೇನು, ಬೇಕಾಗಿರುವ ಅಗತ್ಯ ದಾಖಲೆಗಳೇನು ಈ ಎಲ್ಲಾ ವಿಷಯಗಳ ವಿವರ ಹೀಗಿದೆ ನೋಡಿ.

ಇದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳು ಎಂದರೆ ನೀವು ಕಾರ್ಮಿಕ ಕಾರ್ಡನ್ನು ಮಾಡಿಸಿ ಒಂದು ವರ್ಷ ಪೂರ್ಣವಾಗಿರಬೇಕು. ಕಾರ್ಮಿಕ ಕಾರ್ಡ್ ನಿಮ್ಮ ಬಳಿ ಇರಬೇಕು, ಉದ್ಯೋಗ ದೃಢೀಕರಣ ಪತ್ರ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು, ವಿವಾಹ ನೋಂದಣಿ ಅಧಿಕಾರಿಗಳಿಂದ ಪಡೆದ ವಿವಾಹ ನೋಂದಣಿ ಆಗಿರುವ ಪತ್ರ ಇರಬೇಕು, ಮಕ್ಕಳ ಮದುವೆಯ ಇನ್ವಿಟೇಶನ್ ಕಾರ್ಡ್ ಇರಬೇಕು. ನೀವು ಕರ್ನಾಟಕದಿಂದ ಹೊರ ರಾಜ್ಯದವರಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಕೋರ್ಟಿಂದ ಒಂದು ಅಫಿಡವಿಟ್ ಸಲ್ಲಿಸಬೇಕು ಮತ್ತು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕು ನಿಮ್ಮ ಮಕ್ಕಳ ಮದುವೆ ನಿಗದಿ ಆದ ಅಥವಾ ನೋಂದಣಿ ಆದ ಆರು ತಿಂಗಳ ಒಳಗೆ ನೀವು ಇದಕ್ಕೆ ಅರ್ಜಿ ಸಲ್ಲಿಸಬೇಕು.

ಈ ಎಲ್ಲಾ ಅಗತ್ಯ ದಾಖಲೆಯೊಂದಿಗೆ ನೀವು ಆನ್ಲೈನ್ ಅಲ್ಲಿ ಅಪ್ಲಿಕೇಶನ್ ಹಾಕಬೇಕು. ಸಿಎಸ್‌ಸಿ ಕೇಂದ್ರಗಳಿಗೆ ಹೋಗಿ ಅಪ್ಲಿಕೇಶನ್ ಹಾಕಬಹುದು. ಸೇವಾ ಸಿಂಧು ಪೋರ್ಟಲ್ ಓಪನ್ ಮಾಡಿ ಅದರಲ್ಲಿ ರಿಜಿಸ್ಟರ್ ಐಡಿಯನ್ನು ಹಾಕಿ ಅದು ಓಪನ್ ಆದಮೇಲೆ ಎಡಭಾಗಕ್ಕೆ ವ್ಯೂ ಆಲ್ ಸರ್ವಿಸಸ್ ಎಂದು ಇರುತ್ತದೆ ಅಲ್ಲಿ ಕ್ಲಿಕ್ ಮಾಡಿ. ಆಗ ತೆಗೆದುಕೊಳ್ಳುವ ಪೇಜ್ ಅಲ್ಲಿ ಬಲಭಾಗಕ್ಕೆ ಒಂದು ಸರ್ಚ್ ಬಾರ್ ಇರುತ್ತದೆ. ಅದರಲ್ಲಿ ಲೇಬರ್ ಎಂದು ಹಾಕಬೇಕು. ಆಗ ಕಾರ್ಮಿಕ ಮಂಡಳಿ ಇಂದ ಸಿಗುವ ಎಲ್ಲ ಯೋಜನೆಗಳಲ್ಲಿ ಓಪನ್ ಆಗುತ್ತದೆ. ಅಲ್ಲಿಯ 13ನೇ ಅಲ್ಲಿ ಅಪ್ಲಿಕೇಶನ್ ಫಾರ್ ಮ್ಯಾರೇಜ್ ಅಸಿಸ್ಟೆಂಟ್ ಎಂದು ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದರೆ ಅಪ್ಲಿಕೇಶನ್ ಹಾಕುವುದಕ್ಕೆ ಅಪ್ಲಿಕೇಶನ್ ಫಾರಂ ಓಪನ್ ಆಗುತ್ತದೆ.

ಹೆಡ್ ಲೈನ್ ಅಲ್ಲಿಯೇ ಕಟ್ಟಡr ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮದುವೆ ಸಹಾಯಧನಕ್ಕಾಗಿ ಅರ್ಜಿ ಎಂದು ಇರುತ್ತದೆ ಅ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಸ್ಟ್ಯಾಂಡ್ ಮಾಡಿ ಅಪ್ಲೋಡ್ ಮಾಡುವ ಮೂಲಕ ನೀವು ಆನ್ಲೈನ್ ಅಲ್ಲಿಯೇ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಅವರ ಸಹಾಯ ಪಡೆದು ಅವರ ಕೇಳುವ ದಾಖಲೆ ಕೊಟ್ಟು ಕೂಡ ಅಪ್ಲಿಕೇಶನ್ ಹಾಕಿಸಬಹುದು. ಇಷ್ಟಾದ ಮೇಲೆ ಶೀಘ್ರವಾಗಿ ನಿಮ್ಮ ಅಕೌಂಟಿಗೆ ಬಂದು ಹಣ ಸೇರಲಿದೆ ಈ ಮಾಹಿತಿಯನ್ನು ಇನ್ನು ಹೆಚ್ಚಿನ ಜನರ ಜೊತೆ ಹಂಚಿಕೊಳ್ಳಿ.