ವಿಶ್ವದ ಎಲ್ಲಕ್ಕೂ ಪವರ್ಫುಲ್ ಹಾಗೂ ಎಲ್ಲಕ್ಕೂ ಹೆಚ್ಚು ಅಭಿವೃದ್ಧಿ ಹೊಂದಿದ ದೇಶ ಅಮೆರಿಕಾ ಹುಡುಗಿಯರ ಮದುವೆಯ ವಯಸ್ಸು ಕಡಿಮೆ ಇಟ್ಟಿದ್ದೇಕೆ..?

ಮದುವೆ, ಕುಟುಂಬ ಇದು ಎಲ್ಲರ ಕನಸಾಗಿರುತ್ತದೆ. ಆದರೆ ಸಾಮಾಜಿಕ ಸ್ಥಿರತೆಯ ಸಲುವಾಗಿ ಜೀವನದಲ್ಲಿ ಇದು ತುಂಬಾ ಮಹತ್ವಪೂರ್ಣವಾಗಿದೆ.

ಮದುವೆ ಪ್ರತಿಯೊಬ್ಬನೂ ಹರೆಯಕ್ಕೆ ಬಂದ ನಂತರ ಕಾಣುವ ಸುಂದರ ಕನಸಾಗಿದೆ. ಮದುವೆ ಇದು ಪ್ರಾಚೀನ ಕಾಲದಿಂದಲೂ ಬಂದಿರತಕ್ಕಂತಹ ಪ್ರಕ್ರಿಯೆಯಾಗಿದೆ. ಇದರಲ್ಲಿ ಬರುಬರುತ್ತ ಅನೇಕ ಬದಲಾವಣೆಗಳು ಆಗಿವೆ.

ಮದುವೆ ಪ್ರತಿಯೊಬ್ಬನ ಜೀವನದಲ್ಲಿ ಮಹತ್ವಪೂರ್ಣವಾದ ಬದಲಾವಣೆಯನ್ನು ಹೊತ್ತು ತರುತ್ತದೆ ಅಂದ ಮೇಲೆ ಅದಕ್ಕಾಗಿ ಕೆಲವೊಂದು ನಿಯಮಗಳು ಸಹ ಇರುವದು ಅತ್ಯವಶ್ಯವಾಗಿದೆ. ಹೀಗಾಗಿ ಪ್ರತಿ ದೇಶದಲ್ಲಿ ಮದುವೆಗಾಗಿ ವಯಸ್ಸಿನ ನಿಯಮಗಳು ಬೇರೆ ಬೇರೆ ಇವೆ. ನಮ್ಮ ದೇಶದಲ್ಲಿ ವರನ ವಯಸ್ಸು 21 ಮತ್ತು ವಧುವಿನ ವಯಸ್ಸು 18 ವರ್ಷಗಳು ಪೂರ್ಣವಾಗಿರಲೇಬೇಕು. ಹಾಗೆಯೇ ನಾಯಜರ್ ಮತ್ತು ಎಸ್ಟೋನಿಯಾ ದೇಶಗಳಲ್ಲಿ ಹುಡುಗ ಮತ್ತು ಹುಡುಗಿಯ ವಯಸ್ಸು 15 ಇದ್ದರೂ ಸಾಕು ಅಲ್ಲಿ ಮದುವೆಗೆ ಕಾನೂನು ಪ್ರಕಾರ ಮಾನ್ಯತೆ ಇದೆ.

ಇನ್ನು ಅಮೆರಿಕೆಯ ಮೇಸಾಚ್ಯುಸೆಟ್ಸ್ ನಲ್ಲಿ ಮದುವೆಯ ವಯಸ್ಸು ತುಂಬಾ ಕಡಿತಗೊಳಿಸಲಾಗಿದೆ. ಇಲ್ಲಿ ಹುಡುಗಿಯ ವಯಸ್ಸು 12 ಮತ್ತು ಹುಡುಗನ ವಯಸ್ಸು 14 ನಿರ್ಧರಿಸಲಾಗಿದೆ. ಫಿಲಿಸ್ತೀನ್ ನಲ್ಲಿ ಮದುವೆ ತಂದೆ ತಾಯಿಯ ಅನುಮತಿ ಮೇರೆಗೆ ಆಗುವದು. ಆದರೆ ವಯಸ್ಸು ಮಾತ್ರ ಹುಡುಗನ 16 ಹಾಗೂ ಹುಡುಗಿಯ 15 ನಿರ್ಧರಿಸಲಾಗಿದೆ. ಇನ್ನು ವೇನಜುಎಲಾ ನಲ್ಲಿಯಂತೂ ತುಂಬಾ ವಿರುದ್ಧವಾದ ನಿಯಮವಿದೆ. ಇಲ್ಲಿ ಹುಡುಗನ ವಯಸ್ಸು 14 ಇದ್ದರೆ ಹುಡುಗಿ 16 ಇರಬೇಕಂತೆ. ಹೀಗಾಗಿ ಮದುವೆಯಾಗುವವರಿಗೆ ಈ ಕಾನೂನಿನ ಪ್ರಕಾರವೇ ಮದುವೆಯಾಗಬೇಕಂತೆ.