ಫನ್ನಿ ಜೋಕ್ಸ್: ತಾತಾ.. ತಾತಾ.. ಮಕ್ಕಳು ಹೇಗೆ ಹುಟ್ತಾರೆ ಹೇಳಿ.? ತಾತ: ಆಕಾಶದಿಂದ ಒಬ್ಬ ದೇವತೆ…

ಆರೋಗ್ಯಕರ ಜೀವನವನ್ನು ನಡೆಸುವುದು ಇಂದಿನ ಅವಶ್ಯಕತೆ ಗಳಲ್ಲಿ ಒಂದಾಗಿದೆ. ನಾವೆಲ್ಲರೂ ಕೂಡಾ ನಮ್ಮನ್ನು ನಾವು ಸಂತೋಷವಾಗಿರಿಸಿಕೊಳ್ಳಬೇಕು ಎಂದರೆ ಮೊದಲು ನಮ್ಮ ಮನಸ್ಸು ಸಂತೋಷದಿಂದ ಇರಬೇಕು. ಆದರೆ ನಮ್ಮನ್ನು ನಾವು ಹೇಗೆ ಸಂತೋಷವಾಗಿರಿಸಿಕೊಳ್ಳುವುದು ಎಂಬುದೇ ದೊಡ್ಡ ಪ್ರಶ್ನೆ. ನಮ್ಮನ್ನು ನಾವು ಖುಷಿಯಾಗಿರಲು ಅನೇಕ ಮಾರ್ಗಗಳಿವೆ, ಅಂತಹವುಗಳಲ್ಲಿ ಒಂದು ಸುಲಭ ಮಾರ್ಗ ಎಂದರೆ ಅದು ನಗೆ ಹನಿಗಳನ್ನು ಓದಿ, ಮನಸಾರೆ ನಕ್ಕು, ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು. ಆದ್ದರಿಂದಲೇ ನಿಮಗಾಗಿ ಕೆಲವು ನಗೆ ಹನಿಗಳು ಇಲ್ಲಿವೆ. ಇವುಗಳನ್ನು ಓದಿದರೆ ಖಂಡಿತ ನಗುವನ್ನು ತಡೆಯಲು ಸಾಧ್ಯವೇ ಇಲ್ಲ.‌

ಜೋಕ್: 1
ಡಕಾಯಿತ: ಏಯ್ ನಿನ್ನ ಹೆಸರೇನು?

ಹುಡುಗಿ: ನನ್ನ ಹೆಸ್ರು ಏಂಜಲ್ ಪ್ರಿಯ

ಡಕಾಯಿತ: ಹೌದಾ?? ನನ್ನ ಫೇಸ್ ಬುಕ್ ಫ್ರೆಂಡ್ ಹೆಸರು ಏಂಜಲ್ ಪ್ರಿಯಾ. ಅದಕ್ಕೆ ನಿನ್ನ ಬಿಡ್ತಾ ಇದ್ದೀನಿ ಹೋಗು…

ಡಕಾಯಿತ: ಏಯ್ ನಿನ್ನ ಹೆಸರೇನೋ?

ಹುಡುಗ: ನನ್ನ ಹೆಸರು ತಿಮ್ಮ. ಆದರೆ ಜನ ಫೇಸ್ ಬುಕ್ಕಲ್ಲಿ ನನ್ನ ಕೂಡಾ ಪ್ರೀತಿಯಿಂದ ಏಂಜಲ್ ಪ್ರಿಯಾ ಅಂತಾರೆ…

ಜೋಕ್: 2

ಜೋಕ್: 3
ತಂದೆ ತನ್ನ ಮಗನೊಂದಿಗೆ ಮಾತನಾಡುತ್ತಾ ಹೇಳ್ತಾನೆ,

ತಂದೆ- ಮಗ ಹೊರಗಡೆ ಸ್ವಲ್ಪ ನೋಡು, ಯಾರ ಮನೆ ಮುಂದೆ ಡೋಲು ಶಬ್ದ ಕೇಳ್ತಾ ಇರೋದು

ಮಗ – ಯಾರ ಮನೇಲಿ ಬುದ್ಧಿವಂತ ತಂದೆ ತಾಯಿ ಇದ್ದಾರೋ ಅವರ ಮನೆ ಮುಂದೆ.

ಅವನು ಹಾಗೆ ಅಂದ ಕೂಡಲೇ ಅವರಪ್ಪನ ಚಪ್ಪಲಿಗಳ ರಭಸವಾಗಿ ಅವನ ಕಡೆ ಹಾರ್ಕೊಂಡು ಬಂದವು..

ಜೋಕ್: 4

ಆಪರೇಷನ್ ನಂತರ ರೋಗಿಯು “ಡಾಕ್ಟರ್ ನಾನು ಈಗ ಎಲ್ಲಾ ಸಮಸ್ಯೆಯಿಂದ ದೂರಾಗಿದ್ದೀನಾ” ಎಂದು ಕೇಳಿದ.

ಆಗ ಬಂದ ಉತ್ತರ “ಮಗು, ಡಾಕ್ಟರ್ ಅವರ ಭೂಮಿ ಮೇಲೇನೇ ಇದ್ದಾರೆ. ನೀನು ಮಾತ್ರ ಇಲ್ಲಿಗೆ ಬಂದಿರೋದು. ನಾನು ಡಾಕ್ಟರ್ ಅಲ್ಲ.. ನಾನು ಚಿತ್ರಗುಪ್ತ” ಅಂತ.

ಜೋಕ್: 5

ಜೋಕ್: 6

ವ್ಯಕ್ತಿಯೊಬ್ಬನ ಫೋನ್ ಗೆ ಅಪರಿಚಿತ ನಂಬರ್ ನಿಂದ ಹುಡುಗಿಯೊಬ್ಬಳ ಕಾಲ್ ಬಂತು.

ಹುಡುಗಿ: ಹಲೋ, ನಿಮಗೆ ಮದುವೆ ಆಗಿದ್ಯಾ?

ಪುರುಷ (ಎಕ್ಸೈಟಾಗಿ): ಇಲ್ಲ ನನಗೆ ಇನ್ನೂ ಮದುವೆ ಆಗಿಲ್ಲ ನೀವು ಯಾರು?

ಹುಡುಗಿ: ನಾನು ನಿಮ್ಮ ಹೆಂಡ್ತಿ, ಇವತ್ತು ಮನೆಗೆ ಬನ್ನಿ ಇದೆ ನಿಮಗೆ ನನ್ನ ಕೈಯಲ್ಲಿ..

ಸ್ವಲ್ಪ ಹೊತ್ತಿನ ನಂತರ ಮತ್ತೆ ಅಪರಿಚಿತ ನಂಬರ್…

ಹುಡುಗಿ: ಹಲೋ ನಿಮಗೆ ಮದುವೆ ಆಗಿದ್ಯಾ?

ಪುರುಷ: ಹೌದು ಆಗಿದೆ, ನೀವು ಯಾರು?

ಹುಡುಗಿ: ಮೋಸಗಾರ ನಾನು ನಿನ್ನ ಗರ್ಲ್ ಫ್ರೆಂಡ್.. ನಿನಗೆ ಮದುವೆ ಆಗಿದ್ದು ಇಷ್ಟು ದಿನ ಸುಳ್ಳು ಹೇಳ್ತಾ ಇದ್ದಾ?

ಪುರುಷ: ಸಾರಿ ಡಾರ್ಲಿಂಗ್ ನಾನು ನನ್ನ ಹೆಂಡ್ತಿ ಫೋನ್ ಮಾಡಿದ್ದಾಳೆ ಅನ್ಕೊಂಡೆ..

ಹುಡುಗಿ: ಅಯ್ಯೋ ನಾಯಿ, ಇದು ನಾನೇ, ನಿನ್ನ ಹೆಂಡ್ತಿ ಕಣೋ ಬೇರೆ ನಂಬರಿಂದ ಮತ್ತೆ ಮಾಡಿದ್ದು,.. ಬಾ ಇವತ್ತು ಮನೆಗೆ, ನಿನ್ನ ತಿಥಿ ಮಾಡ್ತೀನಿ..

ಜೋಕ್: 7

ಒಮ್ಮೆ ಪಾಕಿಸ್ತಾನಿ, ಬಾಂಗ್ಲಾದೇಶಿ ಮತ್ತು ಹಿಂದೂಸ್ತಾನಿ ಸ್ನೇಹಿತರು ಕುಳಿತು ಬಿಯರ್ ಕುಡಿಯುತ್ತಿದ್ದರು!

ಆಗ ಪಾಕಿಸ್ತಾನಿ ಬಿಯರ್ ಕುಡಿದ ನಂತರ, ಗಾಜಿನ ಗ್ಲಾಸನ್ನು ಗಾಳಿಯಲ್ಲಿ ಎಸೆದು, ಬಂದೂಕಿನಿಂದ ಗುರಿಯಿಟ್ಟು ಹೊಡೆದಾಗ ಅದು ಒಡೆದು ಚೂರಾಯಿತು.

ಅವನು, “ನಮ್ಮ‌ಇಸ್ಲಾಮಾಬಾದ್‌ನಲ್ಲಿ ಗ್ಲಾಸ್ ತುಂಬಾ ಅಗ್ಗವಾಗಿ ಸಿಗುತ್ತೆ, ಆದ್ದರಿಂದ ನಾವು ಒಂದ್ಸಲ ಬಳಿಸದ್ದ ಗ್ಲಾಸ್ ನಲ್ಲಿ ಮತ್ತೆ ಕುಡಿಯುವುದಿಲ್ಲ”

ಅದನ್ನು ನೋಡಿ ಬಾಂಗ್ಲಾ ದೇಶದವನು ಪ್ರಭಾವಿತನಾಗಿ ತಾನು ಕುಡಿದ ಗಾಜಿನ ಗ್ಲಾಸನ್ನು ಗಾಳಿಯಲ್ಲಿ ಎಸೆದು, ಬಂದೂಕನಿಂದ ಗುರಿ ಮಾಡಿ ಹೊಡೆದು, ಗ್ಲಾಸ್ ಒಡೆದು ಚೂರುಗಳಾಯಿತು..

ಅವನು, “ನಮ್ಮ ಢಾಕಾದಲ್ಲಿ ಗಾಜು ತಯಾರಿಸಲು ಸಾಕಷ್ಟು ಮರಳು ಇದೆ, ಆದ್ದರಿಂದ ನಾವೂ ಸಹ ಒಂದ್ಸಲ ಬಳಿಸಿದ ಗ್ಲಾಸನ್ನು ಮತ್ತೆ ಬಳಸೋದಿಲ್ಲ” ಎಂದ.

ಈಗ ಹಿಂದೂಸ್ತಾನಿ ಸ್ನೇಹಿತನ‌ ಸರದಿ.

ಅವನು ಮುಗುಳ್ನಗುತ್ತಾ ಬಿಯರ್ ಮುಗಿಸಿ ಗಾಜನ್ನು ಗಾಳಿಯಲ್ಲಿ ಎಸೆದನು, ಪಕ್ಕದಲ್ಲಿ ಇದ್ದ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಅವರನ್ನು ತನ್ನ ಬಂದೂಕಿನಿಂದ ಗುಂಡಿಕ್ಕಿ ಕೊಂದ..‌

ಅವನು “ನಮ್ಮ ದೇಶದಲ್ಲಿ ಬಹಳಷ್ಟು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳಿದ್ದಾರೆ, ನಾವು ಒಂದ್ಸಲ ಬಿಯರ್ ಕುಡಿದವರ ಜೊತೆ ಮತ್ತೆ ಕುಡಿಯೋದಿಲ್ಲ” ಎಂದ.

ಜೋಕ್: 8