Funny Jokes: ಮದುವೆಯ ಮೊದಲ ರಾತ್ರಿ ಪತಿ, ತನ್ನ ಪತ್ನಿಯ ಬಳಿ ಹೋಗಿ, ಇವತ್ತು ನನಗೆ ಏನೇನು ಸಿಗಬೇಕೋ ಅದೆಲ್ಲ ಸಿಗಬೇಕು ಅಂದ.. ಕೂಡಲೇ ಹೆಂಡತಿ…
ಕೆಲವೊಮ್ಮೆ ನಮ್ಮ ಮನಸ್ಸನ್ನು ಖುಷಿ ಪಡಿಸಲು ನಾವು ನೆಪಗಳನ್ನು ಹುಡುಕುತ್ತೇವೆ. ಏಕೆಂದರೆ ಕಾರಣವಿಲ್ಲದೆ ನಾವು ಖುಷಿಯಾಗಿರುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ ಇಂದಿನ ಒತ್ತಡದ ಜೀವನ. ಇಲ್ಲಿ ಹಗಲಿರುಳು ದುಡಿದರೂ ಕೂಡಾ ಒಂದು ಉತ್ತಮ ಜೀವನ ರೂಪಿಸಿಕೊಳ್ಳುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ. ಅನೇಕರು ನಗುವನ್ನೇ ಮರೆತು ಹೋಗಿದ್ದಾರೆ. ಆದರೆ ನಗುವುದು ಜೀವನದ ಒಂದು ಭಾಗವಾಗಬೇಕು ಎನ್ನುವುದು ಕೂಡಾ ಅಷ್ಟೇ ಸತ್ಯ. ಅದಕ್ಕೆ ಇಂದು ನಾವು ನಿಮ್ಮನ್ನು ನಗಿಸುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದು, ಕೆಲವು ಜನಪ್ರಿಯ ನಗೆಹನಿಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ.
ಜೋಕ್ ೧
ಹೆಂಡತಿ: ನೀವು ಏನಾದ್ರೂ ಬೈಯ್ಯೋದಾದ್ರೆ ನೇರವಾಗಿ ನನ್ನನ್ನೇ ಬೈದು ಬಿಡಿ, ಪದೇ ಪದೇ ಬೈಗುಳಗಳ ಮಧ್ಯ ನಮ್ಮ ತವರು ಮನೆಯವರ ಹೆಸರು ಯಾಕೆ ಹೇಳ್ತೀರಾ?
ಗಂಡ: ಮನೇಲಿ ಟಿವಿ ಕೆಟ್ಟೋದ್ರೆ ನಾವು ಟಿವಿ ನ ಬೈತೀವಾ, ಇಲ್ಲತಾನೇ? ಬೈಯ್ಯೋದು ಆ ಟಿವಿ ತಯಾರಿಸಿದ ಕಂಪನೀನಾ ತಾನೇ… ಅರ್ಥ ಮಾಡ್ಕೋ..
ಹೆಂಡತಿಗೆ ಈಗ ಹೇಳೋಕೆ ಏನೂ ಉಳಿದಿರಲಿಲ್ಲ…
ಜೋಕ್ ೨
ಪಿಂಕಿ ತನ್ನ ಗಂಡನ ಜೊತೆ ಕುಳಿತು ಕಾಫಿಯ ಸವಿ ಎಂಜಾಯ್ ಮಾಡ್ತಾ, ನ್ಯೂಸ್ ಪೇಪರ್ ಓದ್ತಾ ಒಂದು ಸುದ್ದಿ ಓದಿದಳು. ನಂತರ…
ಪಿಂಕಿ: ಏನ್ರೀ, 80 ವರ್ಷದ ಅವಿವಾಹಿತ ಈ ವಯಸ್ಸಿನಲ್ಲಿ ಮದುವೆ ಆಗಿದೆ ಅಂತ ಸುದ್ದಿ ಬಂದಿದೆ.
ಗಂಡ: ಅಯ್ಯೋ, 80 ವರ್ಷ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿದವನು, ಈಗ ಈ ಇಳಿ ವಯಸ್ಸಲ್ಲಿ ಮೂರ್ಖತನ ಮಾಡಿಬಿಟ್ಟ….
ಜೋಕ್ ೩
ಅಕ್ಕಪಕ್ಕದ ಮನೆಯ ಇಬ್ಬರು ಹೆಂಗಸರು ಮಾತಾಡ್ತಾ ಇದ್ದರು..
ಮೊದಲನೇ ಮಹಿಳೆ: ನಿಂಗೊತ್ತಾ, ನನ್ನ 24 ವರ್ಷಗಳ ಕಾಲ ಮಕ್ಕಳೇ ಆಗಿರಲಿಲ್ಲ…
ಎರಡನೇ ಮಹಿಳೆ: ಹೌದಾ??? ಆಮೇಲೆ ಏನಾಯ್ತು..
ಮೊದಲನೇ ಮಹಿಳೆ: ಏನಾಗುತ್ತೆ, ನನಗೆ 24 ವರ್ಷ ಆದ ಕೂಡಲೇ ನಮ್ಮ ತಂದೆ ತಾಯಿ ನನಗೆ ಮದುವೆ ಮಾಡಿದ್ರು, ಆಮೇಲೆ ವರ್ಷ ಕ್ಕೆ ಗುಂಡ ಹುಟ್ಟಿದ..
ಈ ಮಾತು ಕೇಳಿದ ಎರಡನೇ ಮಹಿಳೆ ಆಸ್ಪತ್ರೆ ಸೇರೋದು ಬಾಕಿ ಇತ್ತು..
ಜೋಕ್ ೪
ಅಜ್ಜಿ ಭಗವದ್ಗೀತೆ ಓದ್ತಾ ಇರೋದು ನೋಡಿದ ಪುಟ್ಟ ಅವರ ಅಮ್ಮನ ಬಳಿಗೆ ಹೋದ…
ಪುಟ್ಟ: ಅಮ್ಮಾ ಅಜ್ಜಿ ಯಾವ ಪರೀಕ್ಷೆ ಬರೆಯೋಕೆ ಪ್ರಿಪೇರ್ ಆಗ್ತಾ ಇದ್ದಾರೆ..
ಅಮ್ಮ: ಅವರು ಈಗ ಫೈನಲ್ ಇಯರ್ ಪರೀಕ್ಷೆಗೆ ಸಿದ್ಧ ಆಗ್ತಾ ಇದ್ದಾರೆ…

ಜೋಕ್ ೫
ಹಳ್ಳಿಯಲ್ಲಿ ಕಲೆಕ್ಷನ್ ಪೋಲಿಂಗ್ ನಡೀತಾ ಇತ್ತು…
ತಾತ: ಏನಪ್ಪಾ ನನ್ನ ಹೆಂಡ್ತಿ ಓಟಾಕಿ ಹೋದ್ಲಾ?
ಏಜೆಂಟ್: ವಿವರ ಕೊಡಿ ತಾತಾ…
ತಾತ ಕೊಟ್ಟ ವಿವರ ಚೆಕ್ ಮಾಡಿ ನೋಡಿದ ಏಜೆಂಟ್…
ಏಜೆಂಟ್ : ತಾತ ನಿಮ್ಮ ಹೆಂಡ್ತಿ ಓಟು ಹಾಕಿ ಹೋಗಿದ್ದಾರೆ..
ತಾತ: ಅಯ್ಯೋ ಸ್ವಲ್ಪ ಬೇಗ ಬಂದಿದ್ರೆ ಅವಳನ್ನು ಮೀಟ್ ಮಾಡಿ, ಮಾತಾಡಿಸಬಹುದಿತ್ತು…
ಏಜೆಂಟ್: ಯಾಕೆ ತಾತ, ನೀವು ಮತ್ತೆ ಅಜ್ಜಿ ಜೊತೇಗಿಲ್ವಾ?
ತಾತ: ಇಲ್ಲಪ್ಪ ಅವಳು ಸತ್ತು ಹತ್ತು ವರ್ಷ ಆಯ್ತು.. ಆದರೆ ಕಲೆಕ್ಷನ್ ದಿನ ಬಂದು ಓಟ್ ಹಾಕಿ ಹೋಗಿ ಬಿಡ್ತಾಳೆ.…
ಜೋಕ್ ೬
ಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ಇಂದ ಪ್ರಕಟಣೆಗೊಂಡ ಒಂದು ಪುಸ್ತಕದ ಹತ್ತು ಲಕ್ಷ ಪ್ರತಿಗಳು ಎರಡೇ ದಿನದಲ್ಲಿ ಮಾರಾಟ ಆಯ್ತಂತೆ…
ಇಷ್ಟಕ್ಕೂ ಏನಾಗಿತ್ತು ಅಂದ್ರೆ ಪುಸ್ತಕದ ಟೈಟಲ್ ನಲ್ಲಿ ಮಿಸ್ಟೇಕ್ ಆಗಿತ್ತು. ಪುಸ್ತಕದ ಹೆಸರು “ಒಂದು ಉಪಾಯ ನಿಮ್ಮ Life ಅನ್ನು ಬದಲಿಸುತ್ತದೆ.” ಆದರೆ ಟೈಟಲ್ ನಲ್ಲಿ “ಒಂದು ಉಪಾಯ ನಿಮ್ಮ Wife ಅನ್ನು ಬದಲಿಸುತ್ತದೆ” ಎಂದು ಆಗಿತ್ತು.
ಜೋಕ್ ೭
ಚಿಂಟುವಿನ ಕಾರ್ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿತು..
ಚಿಂಟುವಿನ ಗೆಳೆಯ: ಯಾಕೆ ಏನಾಯ್ತು?
ಚಿಂಟು: ಕಾರು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅದಕ್ಕೆ ಕಾಯ್ತಾ ಇದ್ದೀನಿ..
ಗೆಳೆಯ: ಆಶ್ಚರ್ಯದಿಂದ ಏನಕ್ಕೆ ಕಾಯ್ತಾ ಇದ್ದೀಯಾ?
ಚಿಂಟು: ನಿರ್ಮಾ ಪೌಡರ್ ಜಾಹೀರಾತಲ್ಲಿ ಬರ್ತಾರಲ್ವಾ ಆ ನಾಲ್ಕು ಜನ ಹೆಂಗಸರು ಯಾವಾಗ ಬರ್ತಾರೆ ಅಂತ…
ಜೋಕ್ ೮
ಮದುವೆಯ ಮೊದಲ ರಾತ್ರಿ ಪತಿ, ತನ್ನ ಪತ್ನಿಯ ಬಳಿ ಹೋಗಿ, ಇವತ್ತು ನನಗೆ ಏನೇನು ಸಿಗಬೇಕೋ ಅದೆಲ್ಲಾ ಸಿಗಬೇಕು ಅಂದ…
ಕೂಡಲೇ ಹೆಂಡತಿ ಅವನ ಕೆನ್ನೆಗೆ ಸರಿಯಾಗಿ ಬಾರಿಸಿದಳು..
ಗಂಡ ಮನಸ್ಸಿನಲ್ಲಿ ಅಬ್ಬಾ ಎಂತಹ ಪ್ರಾಮಾಣಿಕ ಹೆಂಡತಿ ಸಿಕ್ಕಿದ್ದಾಳೆ ನನಗೆ ಅನ್ಕೊಂಡ…