ಈ ಫೋಟೋದಲ್ಲಿ ಅಡಗಿದ ಹೆ”ಬ್ಬಾವನ್ನು ಹುಡುಕುವಿರಾ? ಬೇಕಾದರೆ Zoom ಮಾಡಿ ನೋಡಿ
ಅನೇಕ ಸಲ ಟೈಂಪಾಸ್ ಸಲುವಾಗಿ ಆಡುವ ಆಟಗಳು ಮನುಷ್ಯನ ಬುದ್ಧಿಶಕ್ತಿಗೆ ಕೆಲವೊಮ್ಮೆ ಸವಾಲಾಗಿ ನಿಲ್ಲುತ್ತವೆ. ಅದೇ ರೀತಿಯಲ್ಲಿ ಕೆಲವೊಂದು ಚಿತ್ರಗಳು ಅಥವಾ ಫೋಟೋಗಳು ತುಂಬಾ ಕ್ಲಿಷ್ಟಕರವಾಗಿರುತ್ತವೆ. ಅಂಥ ಫೋಟೋಗಳು ವ್ಯಕ್ತಿಯ ಕಣ್ಣುಗಳ ನಿರೀಕ್ಷಣೆಯ ಕ್ಷಮತೆಗೆ ಮತ್ತು ಶೋಧಕ್ಕೆ ಚಾಲನೆ ಕೊಡುವ ರೀತಿಯಲ್ಲಿ ಇರುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ‘ಫೈಂಡ್ ದ ಸ್ನೇಕ್’ ಹೆಸರಿನ ಚಿತ್ರವೊಂದು ಈಗ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಹೆಬ್ಬಾವು ಇದ್ದು ಅದು ಸಹಜವಾಗಿ ಕಣ್ಣಿಗೆ ಕಾಣುತ್ತಿಲ್ಲ. ಈ ಚಿತ್ರದಲ್ಲಿ ಅಡಗಿದ ಹಾವನ್ನು ನೀವು ಶೋಧಿಸಿ ಹೇಳಬೇಕಾಗಿದೆ. ಈ ಚಿತ್ರವನ್ನು ಆಸ್ಟ್ರೇಲಿಯಾದ ಸರ್ಪ ಮಿತ್ರರು ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಅಡಗಿದ ಹೆಬ್ಬಾವನ್ನು ಶೋಧಿಸಿ ಎಂದು ಚಾಲೆಂಜ್ ಹಾಕಿದ್ದಾರೆ.

ಆಸ್ಟ್ರೇಲಿಯಾದಲ್ಲಿರುವ ಬ್ರಿಸ್ಬೇನ್ ಪಟ್ಟಣದ ಪಶ್ಚಿಮಕ್ಕೆ ಕಳೆದವಾರ ಇಲ್ಲಿಯ ಒಂದು ಮನೆಯಲ್ಲಿ ನುಸುಳಿದ ಕಾರ್ಪೆಟ್ ಕಾಲಿನ್ ಹೆಸರಿನ ಹೆಬ್ಬಾವನ್ನು ಹೊರತೆಗೆಯಲು ಸರ್ಪ ಮಿತ್ರರನ್ನು ಕರೆಯಲಾಗಿತ್ತು. ನ್ಯೂಸ್ 7 ನೀಡಿದ ವರದಿಯ ಪ್ರಕಾರ ಹಾವುಗಳನ್ನು ರಕ್ಷಿಸುವ ತಂಡದವರು ಮನೆಯ ಅಂಗಳದಲ್ಲಿ ಅಡಗಿ ಕುಳಿತ 8 ಫಿಟ್ ಕಾರ್ಪೆಟ್ ಹೆಬ್ಬಾವಿನ ಚಿತ್ರವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿ ತಮ್ಮ ಫಾಲೋವರ್ಸ್ ಗಳಿಗೆ ಹಾವು ಎಲ್ಲಿದೆ ಎಂದು ಶೋಧಿಸಲು ಚಾಲೆಂಜ್ ಹಾಕಿದ್ದರು.
ಮಿತ್ರರೇ, ನೀವು ನೀನು ಚಾಲೆಂಜ್ ಸ್ವೀಕರಿಸುತ್ತೀರಾ? ಸ್ವೀಕರಿಸಿದರೆ ಹೇಳಿ ಹಾವು ಎಲ್ಲಿದೆ ಅಂತ? ಒಂದು ವೇಳೆ ನಿಮಗೆ ಈ ಚಿತ್ರದಲ್ಲಿ ಎಷ್ಟು ಪ್ರಯತ್ನ ಮಾಡಿದರೂ ಹಾವು ಕಾಣಿಸಲಿಲ್ಲವೆಂದಾದರೆ ನಾವು ನಿಮಗೆ ಸ್ವಲ್ಪ ಸಹಾಯ ಮಾಡುತ್ತೇವೆ.

ಇಲ್ಲಿ ಬದಿಗೆ ಇರುವ ಕಟ್ಟಿಗೆಯ ಮೇಲೆ ಹಾವು ಕುಳಿತಿದೆ. ಒಬ್ಬ ಫೇಸ್ಬುಕ್ ಯುಜರ್ ರೆಡ್ ಸರ್ಕಲ್ ಮಾಡಿ ಹಾಕಿದ ಫೋಟೋವನ್ನು ನಾವು ಇಲ್ಲಿ ಅಪ್ಲೋಡ್ ಮಾಡಿದ್ದೇವೆ.