OMG! ಸೈಕಲ್ ಸವಾರನನ್ನೇ ಸೋಲಿಸಿದ ಉಷ್ಟ್ರಪಕ್ಷಿ! ರೋಚಕ ರೇಸಿಂಗ್ Video ವೈರಲ್!
ಪ್ರಾಣಿಗಳ ಚಿತ್ರ-ವಿಚಿತ್ರ ವಿಡಿಯೋಗಳು ತುಂಬಾ ಫನ್ನಿ ಆಗಿರುತ್ತವೆ, ಮತ್ತು ಕೆಲವು ಪ್ರಾಣಿಗಳ ಬುದ್ಧಿವಂತಿಕೆಯನ್ನು ಎತ್ತಿ ತೋರಿಸುವ ಸುಂದರ ವಿಡಿಯೋಗಳು ಸಹಿತ ಇರುತ್ತವೆ. ದಿನಂಪ್ರತಿ ನಾವು ಎಷ್ಟೋ ಕಾಡು ಪ್ರಾಣಿಗಳ ಮತ್ತು ಸಾಕುಪ್ರಾಣಿಗಳ ವಿವಿಧ ವೀಡಿಯೋಗಳನ್ನು ನೋಡುತ್ತಿರುತ್ತೇವೆ. ಕೆಲ ವಿಡಿಯೋಗಳಿಂದ ಪ್ರಾಣಿಗಳು ಸಹಿತ ಎಷ್ಟೊಂದು ಬುದ್ಧಿಯನ್ನು ಹೊಂದಿರುತ್ತವೆ ಎಂಬುದು ತಿಳಿದುಬರುತ್ತದೆ. ಇನ್ನು ಕೆಲವು ಪ್ರಾಣಿಗಳು ತುಂಬಾ ಚುರುಕಾಗಿರುತ್ತವೆ. ಸೋಷಿಯಲ್ ಮೀಡಿಯಾಗಳ ಮಾಧ್ಯಮದಿಂದ ಪ್ರಾಣಿಗಳ ವಿವಿಧ ವಿಡಿಯೋಗಳನ್ನು ನೋಡುವಾಗ ನಮಗೆ ತುಂಬಾ ಎಂಟರ್ಟೈನ್ಮೆಂಟ್ ಸಹಿತ ಸಿಗುತ್ತದೆ.
ಇದೇ ರೀತಿಯ ಆಫ್ರಿಕಾದಲ್ಲಿಯ ಉಷ್ಟ್ರಪಕ್ಷಿಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಉಷ್ಟ್ರ ಪಕ್ಷಿ ಸೈಕಲ್ ರೇಸಿಂಗ್ ಮಾಡುವ ಹುಡುಗರ ಜೊತೆಗೆ ತನ್ನ ದೈತ್ಯ ಕಾಲುಗಳಿಂದ ವೇಗವಾಗಿ ಓಡುತ್ತಿರುವುದು ಕಂಡು ಬರುತ್ತಿದೆ. ವಿಡಿಯೋ ವೀಕ್ಷಿಸುವಾಗ ಸೈಕಲ್ ಸವಾರರ ಮತ್ತು ಉಷ್ಟ್ರಪಕ್ಷಿಯ ಓಡುವ ಸ್ಪರ್ಧೆ ನಡೆದಿರುವ ಹಾಗೆ ಅನಿಸುತ್ತದೆ. ಸೈಕಲ್ ಸವಾರರು ಸೈಕಲ್ ನಡೆಸುತ್ತಿರುವಾಗ ಈ ಪಕ್ಷಿಯು ಮಧ್ಯದಲ್ಲಿ ಬಂದು ಅವರ ಜೊತೆಗೆ ವೇಗವಾಗಿ ಓಡಿ ನಂತರ ಅವರನ್ನು ಹಿಂದಿಕ್ಕಿ ತಾನು ಮಾತ್ರ ಮುಂದೆ ಓಡಿದೆ. ಈ ತುಂಬಾ ಫನ್ನಿ ಯಾದ ವಿಡಿಯೋ ನೆಟ್ಟಿಗರಿಗೆ ಮಾತ್ರ ಇಷ್ಟವಾಗಿದೆ. .
ಈ ದೃಶ್ಯವನ್ನು ಸೈಕಲ್ ಸವಾರನಾದ ಡೇನಿಯಲ್ ರೇಸ್ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಈ ರೇಸಿನಲ್ಲಿ ಉಷ್ಟ್ರಪಕ್ಷಿಯು ಸೈಕಲ್ ಸವಾರರ ಜೊತೆಗೆ ಶಾಮೀಲಾಗಿ ಮೊದಲು ಎಡದಿಂದ ಧಾವಿಸಿ ಆನಂತರ ಮಧ್ಯದಲ್ಲಿ ಸೇರಿ ಬಲಗಡೆಯಿಂದ ಓಡಿದೆ.
ವಿಡಿಯೋ ನೋಡಿ
ಉಷ್ಟ್ರಪಕ್ಷಿಯು ಪಕ್ಷಿಗಳಲ್ಲಿಯೇ ಎಲ್ಲಕ್ಕೂ ದೊಡ್ಡದಾದ ಪಕ್ಷಿಯಾಗಿದೆ. ಇದಕ್ಕೆ ಹಾರಲು ಬರುವುದಿಲ್ಲ ಆದರೆ, ವೇಗವಾಗಿ ಮಾತ್ರ ಓಡಬಲ್ಲದು. ಇದು ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಓಡಬಲ್ಲದು. ಈ ಪಕ್ಷಿಯು ಸಸ್ಯಹಾರಿ ಮತ್ತು ಮಾಂಸಹಾರಿ ಈ ಎರಡು ಗುಂಪಿನಲ್ಲಿ ಬರುತ್ತದೆ. ಕೆಲವೊಮ್ಮೆ ಇವು ಮನುಷ್ಯನ ಮೇಲೆಯೂ ಹಲ್ಲೆ ಮಾಡುವುದುಂಟು. ಸೈಕಲ್ ರೇಸ್ ನಡೆದಿರುವಾಗ ಆಕಸ್ಮಿಕವಾಗಿ ಉಷ್ಟ್ರಪಕ್ಷಿಯು ಮಧ್ಯದಲ್ಲಿ ಎಂಟ್ರಿ ಮಾಡಿದ್ದರಿಂದ ಕೆಲವು ಕ್ಷಣ ಎಲ್ಲರೂ ಬೆಪ್ಪಾಗಿದ್ದರು.