ಹೇಮಾಮಾಲಿನಿ ಜೊತೆ ಮದುವೆಗೆ ಒಪ್ಪಿಗೆ ಕೊಡಲು ಧರ್ಮೇಂದ್ರ ಅವರ ಮೊದಲ ಪತ್ನಿ ಇಟ್ಟಿದ್ದರು ‘ಈ’ ವಿಚಿತ್ರ ಷರತ್ತು!

ಪ್ರೀತಿಸಿ ಮದುವೆ ಮಾಡಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದು 1970/80 ರ ದಶಕದಲ್ಲಿ. ಅದರಲ್ಲೂ ಮೊದಲೇ ಮದುವೆ ಆಗಿದ್ದರೆ ಅದರ ಕಥೆಯೇ ಬೇರೆ ಎನ್ನುವ ಹಾಗಿತ್ತು.

ಹೇಮಮಾಲಿನಿಯವರ ಜೊತೆಗೆ ಮದುವೆ ಮಾಡಿಕೊಳ್ಳುವ ಮೊದಲು ಧರ್ಮೇಂದ್ರ ಅವರು ವೈವಾಹಿಕ ವ್ಯಕ್ತಿಯಾಗಿದ್ದರು. ಹೇಮಾಮಾಲಿನಿಯವರ ಜೊತೆಗೆ ಧರ್ಮೇಂದ್ರ ಅವರ ಮೊದಲ ಭೇಟಿ ಶೂಟಿಂಗ್ ಸಮಯದಲ್ಲಿ ಆಯಿತು. 1979 ರಲ್ಲಿ ಶರಾಫತ್, ತುಂ ಹಸಿ ಮೈ ಜವಾ ಈ ಚಿತ್ರಗಳ ಶೂಟಿಂಗ್ ಸಮಯದಲ್ಲಿ ಇಬ್ಬರು ಅತಿ ಸಮೀಪ ಬಂದರು. ಇಲ್ಲಿಂದ ಶುರುವಾದ ಮೈತ್ರಿಯು ಮುಂದೆ ಮದುವೆಯಲ್ಲಿ ರೂಪಾಂತರವಾಯಿತು.

ಧರ್ಮೇಂದ್ರ ಅವರು ಮೊದಲೇ ವಿವಾಹಿತರಾಗಿದ್ದರು ಹಾಗೂ ಅವರಿಗೆ ತಮ್ಮ ಮೊದಲ ಪತ್ನಿಯನ್ನು ಸಹಿತ ಬಿಡುವ ಮನಸಿರಲಿಲ್ಲ. ಹಿಂದೂ ಮ್ಯಾರೇಜ್ ಆಕ್ಟ್ ಪ್ರಕಾರ ಒಬ್ಬರನ್ನೇ ಮದುವೆಯಾಗಬೇಕಾದ ಕಾರಣದಿಂದಾಗಿ ಧರ್ಮೇಂದ್ರ ಅವರು ಮುಸ್ಲಿಂ ಧರ್ಮವನ್ನು ಸ್ವೀಕರಿಸಿ ದಿಲಾವರ್ ಖಾನ್ ಎಂದು ಮರುನಾಮಕರಣ ಮಾಡಿಕೊಂಡು ಹೇಮಾಮಾಲಿನಿಯವರನ್ನು ಮದುವೆಯಾದರು.

ಅಂದರೆ ಈ ಮದುವೆ ಅಷ್ಟೊಂದು ಸುಲಭವಾಗಿ ಆಗಲಿಲ್ಲ. ಮದುವೆಗೆ ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ವಿರೋಧವಿತ್ತು. ಅಷ್ಟೇ ಅಲ್ಲ ಧರ್ಮೇಂದ್ರ ಅವರ ಮೊದಲ ಪತ್ನಿಯ ಎರಡು ಮಕ್ಕಳು ಬೇರೆ ಇದ್ದರು. ಹೀಗಾಗಿ ಮೊದಲ ಪತ್ನಿಗೂ ಬಿಡುವ ಹಾಗಿರಲಿಲ್ಲ, ಇತ್ತ ಹೇಮಮಾಲಿನಿಯ ಸೌಂದರ್ಯಕ್ಕೂ ಮಾರು ಹೋಗಿ ಇವರಿಗೂ ಬಿಡುವ ಹಾಗಿರಲಿಲ್ಲ.

ಧರ್ಮೇಂದ್ರ ಅವರ ಮದುವೆಯಿಂದ ಅವರ ಮೊದಲ ಪತ್ನಿಯ ಮನಸ್ಸಿಗೆ ತುಂಬಾ ನೋವಾಗಿತ್ತು. ಹಾಗೂ ಧರ್ಮೇಂದ್ರರ ಮೇಲೆ ಅಸಮಾಧಾನಗೊಂಡಿದ್ದರು. ಈ ಅಸಮಾಧಾನದಿಂದಲೇ ಪ್ರಕಾಶ ಕೌರ್ ಅವರು ಧರ್ಮೇಂದ್ರರಿಗೆ ಒಂದು ಶರತ್ತನ್ನು ಹಾಕಿದರು.

ಒಂದು ವೇಳೆ ನೀವು ಹೇಮಾಮಾಲಿನಿಯ ಜೊತೆ ಮದುವೆಯಾಗಿದ್ದೆ ಆದಲ್ಲಿ ಅವರನ್ನು ಎಂದಿಗೂ ಗಂಡನ ಮನೆಗೆ ಅಂದರೆ ಈ ನಾನಿರುವ ಮನೆಗೆ ಕರೆತರಲಿಕ್ಕಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಈ ಮಾತನ್ನು ಧರ್ಮೇಂದ್ರ ಮತ್ತು ಹೇಮಾಮಾಲಿನಿ ಇಬ್ಬರು ಒಪ್ಪಿಕೊಂಡರು. ಆ ಮಾತಿನ ಪ್ರಕಾರ ಇಲ್ಲಿಯವರೆಗೂ ಹೇಮಾ ಮಾಲಿನಿ ಅವರು ಗಂಡನ ಮನೆಯ ಹೊಸ್ತಿಲನ್ನು ತುಳಿದಿಲ್ಲ.

ಧರ್ಮೇಂದ್ರ ಅವರ ತಂದೆ ತಾಯಿಯರಿಬ್ಬರು ಮಾತ್ರ ಇದಕ್ಕೆ ಅಷ್ಟೊಂದು ವಿರೋಧ ಮಾಡಲಿಲ್ಲ. ಅವರಿಬ್ಬರು ಯಾವತ್ತೂ ಹೇಮಾಮಾಲಿನಿ ಅವರ ಮನೆಗೆ ಹೋಗುವುದು ಬರುವುದು ಮಾಡುತ್ತಿದ್ದರು. ಧರ್ಮೇಂದ್ರರ ಮನೆ ಮತ್ತು ಹೇಮಮಾಲಿನಿ ಅವರ ಮನೆಯ ನಡುವೆ ಅಂತರ ಬರೀ ಐದು ನಿಮಿಷದ್ದಾಗಿದೆ.