ಆಹಾರ ತಿನ್ನುವಾಗ ವಿಚಿತ್ರ ಶಬ್ದ ಮಾಡಿದ ಪುಟ್ಟ ಅಳಿಲು; 8 ಲಕ್ಷಕ್ಕೂ ಅಧಿಕ ಜನರು ನೋಡಿದ Viral Video ಒಮ್ಮೆ ನೋಡಿ

ಇತ್ತೀಚೆಗೆ ಎಲ್ಲರ ಹತ್ತಿರ ಕ್ಯಾಮೆರಾ ಮೊಬೈಲ್ ಗಳು ಬಂದು ಯಾವುದೇ ವಿಶೇಷ ದೃಶ್ಯಗಳನ್ನು ತಕ್ಷಣ ವಿಡಿಯೋ ಗಳಲ್ಲಿ ಅಥವಾ ಫೋಟೋದಲ್ಲಿ ಸೆರೆ ಹಿಡಿಯಲು ಸಾಧ್ಯವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಪ್ರಾಣಾಯಾಮ ಮಾಡುತ್ತಿರುವ ಅಳಿಲಿನ ವಿಡಿಯೋ ಒಂದು ತುಂಬಾ ವೈರಲ್ ಆಗಿತ್ತು.

ಈಗ ಪುಟ್ಟ ಅಳಿಲೊಂದು ಆಹಾರ ತಿನ್ನುವಾಗ ಮಾಡಿದ ಶಬ್ದದ ಸುಂದರ ವಿಡಿಯೋ ಈಗ ವೈರಲ್ ಆಗುತ್ತಿದೆ. ಫೋಟೋಗ್ರಾಫರ್ ಒಬ್ಬರು ಈ ಪುಟ್ಟ ಅಳಿಲಿನ ಮರಿಯ ಆಹಾರ ತಿನ್ನುವಾಗಿನ ದೃಶ್ಯವನ್ನು ತುಂಬಾ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಸಾಮಾನ್ಯವಾಗಿ ಅಳಿಲು ಆಹಾರ ತಿನ್ನುವಾಗ ಮಾಡಿದ ಶಬ್ದ ಕೇಳಿದ್ದು ಇದೆ ಮೊದಲು ಅನಿಸುತ್ತೆ. ಇದೇ ಕಾರಣದಿಂದ ಇದು ಎಲ್ಲರ ಚರ್ಚೆಯ ವಿಷಯವಾಗಿದೆ.

ಈ ಸುಂದರವಾದ ವಿಡಿಯೋವನ್ನು ಇಲ್ಲಿಯವರೆಗೆ 16 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ರೀಟ್ವೀಟ್ ಗಳು ಬಂದಿವೆ. ಇದಕ್ಕೆ ಕಾರಣವೂ ಹಾಗೆಯೇ ಇದೆ. ಯಾಕೆಂದರೆ ಅಳಿಲಿನ ಶಬ್ದ ಕೇಳುವದು ತುಂಬಾ ದುರ್ಲಭ, ಅಸಾಧ್ಯವೆಂದರೂ ತಪ್ಪಲ್ಲ.

ಇದರ ಹಿಂದೆ ಅಷ್ಟೇ ಸುಂದರ ಮತ್ತು ಮನ ಮಿಡಿಯುವ ಕಥೆಯು ಇದೆ.

ವಿಡಿಯೋ ನೋಡಿ

ಪ್ರಾಣಿ ಶಾಸ್ತ್ರಜ್ಞ ರಾದ ಡ್ಯಾನಿ ಕಾನರ್ ಅವರು ಇತ್ತೀಚೆಗೆ ನಾಲ್ಕು ಅಳಿಲಿನ ಮರಿಗಳನ್ನು ತನ್ನ ಮನೆಗೆ ಕರೆ ತಂದಿದ್ದಾರೆ. ಈ ಅಳಿಲಿನ ತಾಯಿಯ ಮೃತ್ಯುವಿನ ನಂತರ ಅದರ ನಾಲ್ಕು ಮರಿಗಳನ್ನು ದತ್ತು ಪಡೆದಿದ್ದಾರೆ. ಅದರಲ್ಲಿಯದೇ ಒಂದು 7 ವಾರದ ಹಿಂದೆ ಜನ್ಮಿಸಿದ ಪುಟ್ಟ ಅಳಿಲಿನ ಶಬ್ದವನ್ನು ಮೈಕ್ರೋಫೋನ್ ನಿಂದ ರೆಕಾರ್ಡ್ ಮಾಡಿ ತಮ್ಮ ಟ್ವೀಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಅದು ತೆಗೆದ ವಿಚಿತ್ರ ಶಬ್ದದಿಂದ ಈಗ ಸಖತ್ ವೈರಲ್ ಆಗಿದೆ.