… ಅಲ್ಲಿಯವರೆಗೆ ಸ್ಟೇಡಿಯಂ ಗೆ ಮ್ಯಾಚ್ ನೋಡಲು ಹೋಗುವುದಿಲ್ಲ; ತಮ್ಮ ಮನದಾಳದ ಭಾವನೆ ವ್ಯಕ್ತಪಡಿಸಿದ ಇಶಾನ್ ಕಿಶನ್ ತಾಯಿ

ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಂಡಿತು. ಈ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ರವಿವಾರದಂದು ಆಡಿದ ಈ ಪಂದ್ಯದಲ್ಲಿ ಉದಯೋನ್ಮುಖ ಆಟಗಾರ ಇಶಾನ್ ಕಿಶನ್ ಅವರು ಇಡೀ ದೇಶದ ಕ್ರಿಕೆಟ್ ರಸಿಕರ ಮನಸ್ಸನ್ನು ಗೆದ್ದರು.

ಭಾರತೀಯ ತಂಡದಲ್ಲಿ ತಮ್ಮ ಮಗನ ಆಯ್ಕೆಯಾಗುತ್ತಲೇ ಇಶಾನ್ ಕಿಶನ್ ಅವರ ತಂದೆ-ತಾಯಿಗಳ ಖುಷಿ ಮುಗಿಲುಮುಟ್ಟಿತ್ತು. ಇಶಾನ್ ಅವರ ತಂದೆ ಹೇಳುವ ಪ್ರಕಾರ ದೇಶಕ್ಕಾಗಿ ಆಡುವ ಚಿಕ್ಕಂದಿನಿಂದಲೂ ಕಂಡ ಕನಸು ಇಂದು ನನಸಾಯಿತು. ಇದಕ್ಕಾಗಿ ನನ್ನ ಮಗ ಈಶಾನ್ ಹಗಲು ರಾತ್ರಿ ಪ್ರಯತ್ನ ಪಟ್ಟಿದ್ದಾನೆ ಎಂದು ಹೇಳುವಾಗ ಆನಂದಾಶ್ರುಗಳು ಧಾರೆಯಾಗಿ ಹರಿಯುತ್ತಿದ್ದವು.

ಇಶಾನ್ ಅವರು 9ನೇ ತರಗತಿಯಲ್ಲಿದ್ದಾಗ ಪಂದ್ಯ ಮತ್ತು ಎಕ್ಸಾಮ್ ಎರಡು ಒಂದೇ ದಿವಸ ಇದ್ದವು. ಶಾಲೆಯಲ್ಲಿ ಶಿಕ್ಷಕರು ಒಂದು ವೇಳೆ ನೀನು ಎಕ್ಸಾಮ್ ತಪ್ಪಿಸಿದರೆ ನಿನ್ನನ್ನು ಶಾಲೆಯಿಂದ ತೆಗೆದು ಹಾಕುತ್ತೇನೆ ಎಂದು ವಾರ್ನಿಂಗ್ ಮಾಡಿದ್ದರು. ಆದರೂ ನಾನು ಮಗನಿಗೆ ಸಪೋರ್ಟ್ ಮಾಡಿದೆ. ತಾಯಿ ಮಾತ್ರ SSLC ಆದರೂ ಪಾಸಾಗಲಿ ಎಂದು ಚಿಂತೆ ಮಾಡುತ್ತಿದ್ದಳು.

ಇದೇ ಸಂದರ್ಭದಲ್ಲಿ ಈಶಾನ್ ಅವರ ತಾಯಿಯೂ ತಮ್ಮ ಮನದಾಳವನ್ನು ಬಿಚ್ಚಿದರು. ಎಲ್ಲಿಯವರೆಗೆ ಈಶಾನ್ ಅಂತರಾಷ್ಟ್ರೀಯ ಪಂದ್ಯ ಆಡುವುದಿಲ್ಲ ಅಲ್ಲಿಯವರೆಗೆ ನಾನು ಆತನ ಮ್ಯಾಚ ನೋಡಲಿಕ್ಕೆ ಸ್ಟೇಡಿಯಂಗೆ ಹೋಗುವುದಿಲ್ಲವೆಂದು ಹೇಳಿದ್ದರು.

ಕರಿಯರ್ ಮೊದಲ ಪಂದ್ಯದಲ್ಲೇ ಇಶಾನ್ ಅವರು ಫೋರ್ ಮತ್ತು ಸಿಕ್ಸ್ ಗಳನ್ನು ಭರ್ಜರಿಯಾಗಿ ಬಾರಿಸಿದರು. ತಮ್ಮ ಮೊದಲ ಪಂದ್ಯದಲ್ಲಿಯೇ ಬರೀ 28 ಬಾಲ್ ಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ. ಅವರ ಆಟದ ಇನ್ನೊಂದು ವಿಶೇಷತೆ ಏನೆಂದರೆ ಸಿಕ್ಸ್ ಬಾರಿಸಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ಅವರು ಒಟ್ಟು 32 ಎಸೆತಗಳಲ್ಲಿ 56 ರನ್ನುಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ತನ್ನ ಕಡೆಗೆ ಸೆಳೆಯುವಂತೆ ಮಾಡಿಕೊಂಡರು.