ಕೊರೋನ ಲಕ್ಷಣ ಕಂಡುಬಂದರೆ ಅಪ್ಪಿತಪ್ಪಿಯೂ ನೀವಾಗೇ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ!
ಕೊರೊನ ವೈರಸ್ ನಿಂದ ಬಳಲುತ್ತಿರುವ ಎಲ್ಲರೂ ಆಸ್ಪತ್ರೆಗೇ ದೌಡಾಯಿಸಬೇಕು ಅಂತೇನಿಲ್ಲ, ಮನೆಯಲ್ಲಿಯೇ ಸೂಕ್ತ ಚಿಕಿತ್ಸೆಯ ಮೂಲಕ ಪಡೆದ ಹುಷಾರಾಗಬಹುದು. ಆದರೆ ನಾವೇ ಎಂಬಿಬಿಎಸ್ ವೈದ್ಯರೇನೋ ಎಂಬಂತೆ ನಮಗೆ ತಿಳಿದ ಮಾತ್ರೆ ತಗೆದುಕೊಳ್ಳಬಾರದು. ಸರಿಯಾದ ಔಷಧಿಗಳನ್ನು ವೈದ್ಯರ ಸಕಹೆಯ ಮೇರೆಗೇ ತೆಗೆದುಕೊಳ್ಳಬೇಕು.
ಮೊದಲಿನಿಂದಲೂ ನಾವು ಡಾಕ್ಟರ್ ಥರ ಆಡುವುದು ಹೆಚ್ಚು, ಜ್ವರ ಬಂದ ಕೂಡಲೇ ಪಾರಾಸಿಟಾಮೋಲ್, ನೆಗಡಿ ಬಂದರೆ ಸಿಟ್ರಿಜನ್, ಮೈ ಕೈ ನೋವಿಗೆ ಐಬುಪ್ರೊಫೇನ್… ಹೀಗೆ ನಮಗೆ ತಿಳಿದ ಔಷಧಿ ತಗೆದುಕೊಳ್ಳುತ್ತೇವೆ. ಆದರೆ ಇದು ಈಗ ಕೊರೋನ ಕಾಲದಲ್ಲಿ ಭಾರಿ ಅಪಾಯಕಾರಿ ನಡೆಯಾಗಲಿದೆ. ರೋಗ ಲಕ್ಷಣಗಳ ಪ್ರಕಾರ ನಾವ್ ನಾವೇ ಚಿಕಿತ್ಸೆ ಕೊಟ್ಟುಕೊಳ್ಳುವುದು ಜೀವಕ್ಕೆ ಹಾನಿಕಾರಕ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕೊರೋನ ಲಕ್ಷಣ ಇದ್ದಾಗ ನಾವು ನಮಗೆ ತಿಳಿದ ಔಷಧಿ ತಗೆದುಕೊಳ್ಳುವುದರ ಬಗ್ಗೆ ತೀವ್ರವಾಗಿ ಎಚ್ಚರಿಸಿದೆ. ಅವರ ಮಾತನ್ನು ಪಾಲಿಸದೇ ನಾವೇ ವೈದ್ಯರ ಥರ ಆಡಲು ಹೋದರೆ ಆರೋಗ್ಯ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆ ಇದೆಯಂತೆ.

ಹೃದಯದ ತೊಂದರೆ ಇರುವವರಿಗೆ ಐಬುಪ್ರೊಫೇನ್ (Ibuprofen) ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇಂಥ ಪೇನ್ ಕಿಲ್ಲರ್ ಗಳನ್ನು ತಗೆದುಕೊಳ್ಳುವುದರಿಂದ ಕೊರೋನ ಲಕ್ಷಣಗಳು ಕಡಿಮೆಯಾಗುವ ಬದಲು ಹೆಚ್ಚಾಗಬಹುದು. ಅಲ್ಲದೇ ಇವು ಮೂತ್ರಪಿಂಡಕ್ಕೆ ಇನ್ನಿಲ್ಲದ ಹಾನಿ ಮಾಡಬಹುದು. ಅದಕ್ಕಾಗಿ ವೈದ್ಯರ ಸಲಹೆ ಇಲ್ಲದೇ ಪೇನ್ ಕಿಲ್ಲರ್ ತಗೆದುಕೊಳ್ಳಬಾರದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಸಕ್ಕರೆ ಕಾಯಿಲೆ, ಹೃದಯ ರೋಗಿಗಳು, ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳಿಗೆ ಕೊರೋನ ಹರಡುವಿಕೆ ಹೆಚ್ಚಾಗಿರುವುದಿಲ್ಲ ಎನ್ನಲಾಗುತ್ತಿದೆ. ಆದರೂ ಇವರಿಗೆ ಕೊರೋನ ರೋಗಲಕ್ಷಣ ಕಂಡುಬಂದರೆ ತಕ್ಷಣ ಕೊರೋನ ಟೆಸ್ಟ್ ಮಾಡಿಸಬೇಕು ಹಾಗೂ ವೈದ್ಯರ ಸಲಹೆಯ ಮೇರೆಗೇ ಔಷಧಿ ಮಾತ್ರೆ ಸೇವಿಸಬೇಕು.
ಆಸ್ಪತ್ರೆಯಲ್ಲಿ ಬೆಡ್ ಸಿಗದ ಇಂಥ ಪರಸ್ಥಿತಿಯಲ್ಲಿ ಮನೆಯಲ್ಲಿ ಐಸೋಲೇಶನ್ ಆಗುವುದು ಹೊಸದೇನಲ್ಲವಾದರೂ, ನಿಮಗೆ ತಿಳಿದ ಮಾತ್ರೆ ಅಥವಾ ಇತರೆ ಕೊರೋನ ರೋಗಿಗಳಿಗೆ ಕೊಟ್ಟ ಮಾತ್ರೆಯನ್ನು ನೋಡಿಕೊಂಡು ಅವುಗಳನ್ನೇ ನುಂಗುತ್ತಾ ಕೂರಬಾರದು. ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಮುಂದುವರೆಯಿರಿ.

ಕೆಲವೊಮ್ಮೆ ನಿಮಗೆ ವೆಂಟಿಲೇಟರ್ ಅವಶ್ಯಕತೆ ಬೀಳಬಹುದು, ವೈದ್ಯರ ಬಳಿ ಹೋದರೆ ಅವರು ನಿಮಗೆ ಆಕ್ಸಿಜನ್ ಅವಶ್ಯಕತೆ ಇದೆಯೋ ಇಲ್ಲವೋ ನಿರ್ಧರಿಸುತ್ತಾರೆ, ಹಾಗೂ ಮನೆಯಲ್ಲಿಯೇ ಇರಲು ಅವರೇ ಸಲಹೆ ಕೊಡುತ್ತಾರೆ. ಅದು ಬಿಟ್ಟು ಯಾರಿಗೂ ಹೇಳಿಕೊಳ್ಳದೇ ಮನೆಯಲ್ಲೇ ಸಪರೇಟ್ ರೂಮಲ್ಲಿ ಕೂರಬೇಡಿ.
-Team Infotrend