Articles

VIDEO : ಬ್ಯಾಂಕಿಗೆ ಬಂದ ಗ್ರಾಹಕನ ಕೈಗೆ ಸ್ಯಾನಿಟೈಸರ್ ಹೊಡೆಯಲು ಮುಂದಾದ ಬ್ಯಾಂಕ್ ಕರ್ಮಿ : ಅದನ್ನು ಫರ್ಫ್ಯುಮ್ ಎಂದು ತಿಳಿದ ಗ್ರಾಹಕ! ನಕ್ಕು ಸುಸ್ತಾದ ಜನ

ತಮಾಷೆ ಮಾಡೋಕೆ ಇಷ್ಟಿಷ್ಟುದ್ದ ಡೈಲಾಗ್, ಐದೈದು ನಿಮಿಷದ ವಿಡಿಯೊನೇ ಆಗಬೇಕಂತೇನಿಲ್ಲ, ಕೇವಲ ಒಂದು ಮಾತು, ಒಂದು ನೋಟ ಕೂಡ ನು ತರಿಸಬಹುದು. ಇಲ್ಲಿರೊ ವಿಡಿಯೊ ನೋಡಿ ಕೇವಲ ಹದಿನೈದು ಸೆಕೆಂಡಿನಲ್ಲಿ ನಮ್ಮನ್ನು ನಗುವಿನ ಕಡಲಲ್ಲಿ ತೇಲಿಸುತ್ತದೆ.

ತುಂಬಾ ಸಿಂಪಲ್ಲಾಗಿ ತಮಾಷೆ ಮಾಡುವುದು ಹೇಗೆ ದು ತೋರಿಸಿಕೊಟ್ಟ ವಿಡಿಯೊ ಇದು, ಮಾತುಗಳ ಅವಶ್ಯಕತೆಯೆ ಇಲ್ಲ, ಶಿರ್ಷಿಕೆ ಕೂಡ ಬೇಕಾಗಿಲ್ಲ. ಅವರ ಹಾವ ಭಾವ ನೋಡಿದರೇನೇ ಅಲ್ಲೇನಾಗುತ್ತಿದೆ ಎಂದು ಗುರುತಿಸಿಬಿಡಬಹುದು. ಅದೂ ಹೆಚ್ಚೇನಿಲ್ಲ ಕೆಲವೇ ಸೆಕೆಂಡುಗಳಲ್ಲಿ ಹೇಳಬೇಕಾದುದನ್ನು ಹೇಳಿಬಿಟ್ಟಿದ್ದಾರೆ.

ಇದೇ ವಿಡಿಯೊವನ್ನು ಒಂದು ವರ್ಷದ ಹಿಂದೆ ಮಾಡಿದ್ದೆ ಅರ್ಥವಾಗುತ್ತಿರಲಿಲ್ಲ, ಇನ್ನೊಂದು ವರ್ಷ ನಂತರ ನೋಡಿದರೆ ಬಹುಶಃ ಅರ್ಥವಾಗಲ್ಲ. ಇದೊಂಥರಾ ಕರೆಂಟ್ ಅಫೆರ್ಸ್ ವಿಡಿಯೊ. ಕೊರೋನ ಹಾವಳಿ ಸುರುವಾಗಿ ನಾವೆಲ್ಲ ಸ್ಯಾನಿಟೈಸರ್ ಬಳಸತೊಡಗಿದ ಕಾಲದ್ದಿದು. ಇದಕ್ಕೂ ಮೊದಲು ಅದೇನು ಅಂತಾನೇ ನಮಗೆ ಗೊತ್ತಿರಲಿಲ್ಲ, ಅಥವಾ ಬಳಸುತ್ತಿರಲಿಲ್ಲ.

ಬ್ಯಾಂಕ್ ಕರ್ಮಿಯೊಬ್ಬರು ಗ್ರಾಹಕರಿಗೆ ಸ್ಯಾನಿಟೈಸರ್ ಹಾಕಲು ಮುಂದಾದಾಗ ಆತ ಪರ್ಫ್ಯೂಂ ಎಂದು ತಿಳಿದು ಕೈ ಮೇಲೆತ್ತುತ್ತಾನೆ! ಹಾಗಲ್ಲಪಾ ಕೈ ತೋರಿಸು ಅಂತ ಸನ್ನೆ ಮಾಡಿದರೆ ಕೈಯಲ್ಲಿ ಏನೂ ಇಲ್ಲ ಎಂದು ತೋರಿಸುತ್ತಾನೆ, ವಿಡಿಯೊ ಮೇಲಿದೆ ನೋಡಿ.

-Team Infotrend

Leave a Comment

Your email address will not be published. Required fields are marked *