ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದು – ಚಿನ್ನು ಸರಳ ವಿವಾಹ ಹೇಗಿತ್ತು ನೋಡಿ

ಕನ್ನಡದ ಅತ್ಯಂತ ಯಶಸ್ವಿ ದಾರಾವಾಹಿಗಳಲ್ಲಿ ಒಂದಾದ ಲಕ್ಷ್ಮೀ ಬಾರಮ್ಮ ಮೂಲಕ ನಾಡಿನ ಮನೆಮನೆಯಲ್ಲೂ ಚಿರಪರಿಚಿತರಾದ ಚಂದನ್ ಮತ್ತು ಕವಿತಾ ಗೌಡ, ದಾರಾವಾಹಿಯಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ಜೋಡಿಯಾಗಿದ್ದಾರೆ. ಕೊರೋನ ಲಾಕ್ ಡೌನ್ ಇರುವುದರಿಂದ ಗೈಡ್ ಲೈನ್ಸ್ ಪ್ರಕಾರವೇ ಇವರಿಬ್ಬರೂ ಸರಲವಾಗಿ ಕೆಲವೇ ಜನರ ಉಪಸ್ಥಿತಿಯಲ್ಲಿ ಮದುವೆಯಾದರು.

ಈ ದಾರಾವಾಹಿ ಜೋಡಿ ಮಾಸ್ಕ್ ಧರಿಸಿಯೇ ಮದುವೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತಾಳಿ ಕಟ್ಟುವಾಗಲೂ ಕೂಡ ಇಬ್ಬರೂ ಮಾಸ್ಕ್ ಧರಿಸಿದ್ದರೂ, ಆ ಮೂಲಕ ಸಮಯ ಎಂಥದೇ ಇರಲಿ ಜಾಗೃತೆ ಮುಖ್ಯ ಎಂಬುದನ್ನು ಸಾರಿದರು. ದೇಶಾದ್ಯಂತ ಕೊರೋನ ಎರಡನೇ ಅಲೆ ರಣಕೇಕೆ ಹಾಕುತ್ತಿದ್ದರೂ ಕೆಲವರು ಇನ್ನೂವರೆಗೂ ಮಾಸ್ಕ್ ಇಲ್ಲದೇ ತಿರುಗುತ್ತಿದ್ದಾರೆ.

ಮಾಸ್ಕ್ ಬಗ್ಗೆ ಪ್ರಶ್ನಿಸಿದ ಪೊಲೀಸರ ಮೇಲೆಯೇ ಎಗರಾಡಿಸ ಹಕವು ವಿಡಿಯೊಗಳನ್ನು ಕೂಡ ನಾವು ನೋಡಿದ್ದೇವೆ‌. ಹೀಗಿರುವಾಗ ಮದುವೆಯಂಥ ಪ್ರಮುಖ ಕಾರ್ತದಲ್ಲೂ ಈ ಸೆಲೆಬ್ರಿಟಿಗಳು ಮಾಸ್ಕ್ ಧರಿಸಿ ಮಾದರಿಯಾದರು. ಏನೂ ಹೇಳದೇ, ಕೃತ್ಯದ ಮೂಲಕ ಅವರ ಅಭಿಮಾನಿಗಳನ್ನು ಈ ಮೂಲಕ ಜಾಗರೂಕರನ್ನಾಗಿಸಿದ್ದು ವಿಶೇಷವಾಗಿತ್ತು.

ಮೊದಲಿನಿಂದಲೂ ಚಂದನ್ – ಕವಿತಾರ ಸ್ನೇಹದ ಕುರಿತು ಗುಸು ಗುಸು ಇದ್ದವು. ನಂತರ ಏಪ್ರೀಲ್ ಒಂದರಂದು ಒಂದು ಖಾಸಗಿ ಹೊಟೆಲ್ ನಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಸ್ನೇಹಕ್ಕೆ ಸಂಬಂದದ ಮುದ್ರೆ ಒತ್ತಿದ್ದರು. ಆಗ ಮದುವೆ ದಿನ ಕೂಡ ಪ್ರಕಟಿಸಿದ್ದರು‌‌. ಅದರಂತೆ ಈಗ ಅತ್ಯಂತ ಸರಲ ಸಮಾರಂಭದಲ್ಲಿ ಮದುವೆ ಕೂಡ ಆದರು.

ಚಂದನ್ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ್ದು, ಫೈನಲ್ ವರೆಗೆ ಹೋಗಿ ರನ್ನರ್ ಅಪ್ ಆಗಿದ್ದರು. ಆಗ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಚಂದನ್ ಗಳಿಸಿಕೊಂಡಿದ್ದರು. ನಂತರ ಅವರು ತಿರುಗಿ ನೋಡಿಯೇ ಇಲ್ಲ. ಕವಿತಾ ಗೌಡ ಕೂಡ ಯಶಸ್ವಿ ನಟಿಯಾಗಿದ್ದು, ಇಬ್ಬರದೂ ಹೇಳಿ ಮಾಡಿಸಿದ ಜೋಡಿ.

ಬೆಂಗಳೂರಿನ ಸಹಕಾರ ನಗರದಲ್ಲಿರುವ ಮನೆಯಲ್ಲಿ ಮದುವೆ ಆಗಿರುವ ವಿಷಯವನ್ನು ಕವಿತಾ ಗೌಡ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮನೆ ಮದುವೆ, ಮದುವೆ ಮನೆ. Not glorious but filled with happiness.. Married to @chandan_kumar_official ಎಂದು ಬರೆದು ಮದುವೆ ಫೋಟೊ ಶೇರ್ ಮಾಡಿದ್ದಾರೆ. ಇಬ್ಬರ ಜೀವನ ಸುಖಮಯವಾಗಿರಲಿ, ಅವರಿಬ್ಬರ ನಟನಾ ಬದುಕು ಕೂಡ ಯಶಸ್ಸಿನಿಂದ ಕೂಡಲಿ ಎಂದು ಹಾರೈಸೋಣ.
-Team Infotrend