VIDEO : ಪ್ಲಾಸ್ಟಿಕ್ ಕವರ್ ನಲ್ಲಿ ಸಿಕ್ಕಿಬಿದ್ದ ಮೀನನ್ನು ಧುಮುಕುಕೋರ ರಕ್ಷಿಸಿದ ಮುದ್ದಾದ ವಿಡಿಯೋ ನೋಡಿ

ಪ್ಲಾಸ್ಟಿಕ್ ಪ್ಯಾಕೆಟ್ ಒಳಗೆ ಸಿಕ್ಕಿಬಿದ್ದ ಮೀನನ್ನು ರಕ್ಷಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಕೂಬಾ ಡೈವರ್ ಪ್ರೀತಿಯಿಂದ ದುಮುಕಿ ಅದನ್ನು ರಕ್ಷಿಸಿದ ವಿಡಿಯೊ ಬಹುಶ ಹಳೆಯದು, ಆದರೆ ಈಗ ಈ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಮತ್ತು ಹೆಚ್ಚು ವೈರಲ್ ಆಗುತ್ತಿದೆ.

ಭಾರತೀಯ ಅರಣ್ಯ ಸೇವೆಯ (IFS) ಸುಶಾಂತ್ ನಂದಾ ರವರು ಈ ವಿಡಿಯೋವನ್ನು ಟ್ವಿಟರ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊ ತುಂಬಾ ಮುದ್ದಾಗಿದ್ದು, ಇದರಲ್ಲಿ ಸ್ಕೂಬಾ ಡೈವರ್‌ ಗಳು ಮೀನುಗಳಿಗೆ ಸಹಾಯ ಮಾಡುತ್ತಾರೆ. ದಕ್ಷಿಣ ಥೈಲ್ಯಾಂಡ್‌ ನ ಫುಕೆಟ್‌ ನಲ್ಲಿ ಸ್ಕೂಬಾ ಟೀಚರ್ ನ್ಯಾಟ್ ಸೆನ್‌ ಮುವಾಂಗ್ ಈ ಮೀನನ್ನು ರಕ್ಷಣೆ ಮಾಡಿರುವುದು.

ತನ್ನ ಸ್ನೇಹಿತರೊಂದಿಗೆ ಡೈವಿಂಗ್ ಮಾಡುತ್ತಿದ್ದಾಗ ಅವರ ಕಣ್ಣು ಈ ಮೀನಿನ ಮೇಲೆ ಬಿದ್ದಿತು. ಪ್ಲಾಸ್ಟಿಕ್ ಚೀಲದೊಳಗೆ ಸಿಕ್ಕಿಬಿದ್ದ ಮೀನನ್ನು ಅವರು ನೋಡಿದರು. ಆ ಪ್ಯಾಕೆಟ್‌ ನಿಂದ ಹೊರಬರಲು ಮತ್ತು ಜೀವಂತವಾಗಿರಲು ಅದು ನಿರಂತರವಾಗಿ ಹೆಣಗಾಡುತ್ತಿತ್ತು. ಆದರೆ ಪ್ಲಾಸ್ಟಿಕ್ ಟ್ರಾನ್ಸಪರೆಂಟ್ ಇದ್ದು ಹೊರಗಡೆಯದಲ್ಲ ಕಣ್ಣಿಗೆ ಕಾಣಿಸಿದರೂ ಹೊರಬರಲು ದಾರಿ ತೋಚದೇ ಅದು ಪೇಚಾಡುತ್ತಿತ್ತು.

ಇದನ್ನು ನೋಡಿದ ನ್ಯಾಟ್ ಸೆನ್ಮುವಾಂಗ್ ಮೀನು ಸಿಕ್ಕಿಬಿದ್ದ ಜಾಗಕ್ಕೆ ಹೋಗಿ, ಆ ಮೀನು ಇದ್ದ ಆ ಪ್ಲಾಸ್ಟಿಕ್ ಪ್ಯಾಕೆಟ್ ಅನ್ನು ತೆಗೆದುಕೊಂಡು ಮೀನನ್ನು ಹೊರತೆಗೆದನು. ನಂತರ ಮೀನು ಹೊರಗೆ ಹೋಗಿ ಸಮುದ್ರದಾಳಕ್ಕೆ ಈಜುತ್ತಾ ಹೊರಟು ಹೋಯಿತು. ತನನ್ನು ಪಾರು ಮಾಡಿದವನಿಗೆ ಮನದಲ್ಲೇ ಧನ್ಯವಾದ ತಿಳಿಸಿರಬಹುದು.

ಈ ವೀಡಿಯೊವನ್ನು ಅಪ್‌ ಲೋಡ್ ಮಾಡುವಾಗ, ಸುಶಾಂತ್ ನಂದಾ ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೀಗೆ “ಮನುಷ್ಯ ಎಲ್ಲಿದ್ದರೂ ಅವನಿಗೆ ಒಳ್ಳೆಯ ಕೆಲಸ ಮಾಡುವ ಅವಕಾಶ ಇರುತ್ತದೆ” ಎಂದು ಬರೆದಿದ್ದಾರೆ. ವಿಡಿಯೊ ಮೇಲಿದೆ ನೋಡಿ.
-Team Infotrend