Video; ಮುಂಬಯಿ ಸುತ್ತಾಡಲು ಬರುವವರು ಇಲ್ಲಿಯ ಲೈಫ್ ಲೈನ್ ಲೋಕಲ್ ಟ್ರೈನ್ ನ ಈ ದೃಶ್ಯ ಒಮ್ಮೆ ನೋಡಿ, ಆಮೇಲೆ ಬನ್ನಿ.

ಮುಂಬಯಿ ಹೆಸರು ಕೇಳಿದರೇನೆ ಸಾಕು ಎಷ್ಟೋ ಜನ ಓ ಆದಾ ತುಂಬಾ ರಶ್ಯ ಅಂತಾರೆ. ಇಲ್ಲಿಯ ಲೋಕಲ್ ಟ್ರೈನ್ ಗೆ ಲೈಫ್ ಲೈನ್ ಅಂತಲೇ ಪ್ರೀತಿಯಿಂದ ಕರೆಯುತ್ತಾರೆ. ಇದರಲ್ಲಿ ಸಂಚಾರ ಮಾಡುವ ಶಕ್ತಿ, ಪೇಶನ್ಸ್ ಒಂದನ್ನು ಪಡೆದುಕೊಂಡರೆ 75% ಯುದ್ಧ ಗೆದ್ದ ಹಾಗೆಯೇ ಸರಿ. ಅಷ್ಟೊಂದು ಗದ್ದಲದಿಂದ ತುಂಬಿರುತ್ತವೆ ಈ ಲೋಕಲ್ ಟ್ರೈನ್ ಗಳು ಮತ್ತು ಇಲ್ಲಿಯ ಸ್ಟೇಶನ್ ಗಳು.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಲ ಲೋಕಲ್ ಟ್ರೈನ್ ಗಳ ರೋಚಕ ವಿಡಿಯೋ ದೃಶ್ಯಗಳು ನೋಡಲು ಸಿಗುತ್ತವೆ. ಇವುಗಳನ್ನು ನೋಡಿದ ನಂತರ ನಾವೆಲ್ಲೆ ಕುಳಿತಿರಲಿ ಸಣ್ಣಗೆ ಎದೆ ಕಂಪಿಸುತ್ತದೆ. ಇನ್ನು ಯಾವಾಗಲಾದರೂ ಮುಂಬಯಿಗೆ ಒಮ್ಮೆ ಭೇಟಿಯಾಗಿ ಹೋಗಿದ್ದರೆ ಮುಗಿದೇ ಹೋಯಿತು ಬರೀ ನೆನಸಿದರೇನೆ ಮೈ ಬೆವರುತ್ತದೆ. ಇಂಥ ಅನುಭವಗಳು ಈ ಮುಂಬಯಿ ಪಟ್ಟಣದ್ದು.

ಸದ್ಯ ಇಲ್ಲಿ ನೋಡುವ ವಿಡಿಯೋ ಒಂದು ತುಂಬಾ ರೋಚಕತೆಯಿಂದ ಕೂಡಿದೆ. ಉಪನಗರ ಸ್ಟೇಶನ್ ಗಳು ಇಲ್ಲಿ ಸದಾ ಗಜಿಬಿಜಿಯಿಂದ ಕೂಡಿರುತ್ತವೆ. ಅದರಲ್ಲಿ ಮುಂಜಾನೆ ಮತ್ತು ಸಾಯಂಕಾಲದ ಹೊತ್ತಿನಲ್ಲಂತೂ ಈ ಗದ್ದಲ ತುಂಬಾನೇ ಹೆಚ್ಚಾಗಿರುತ್ತದೆ. ಈ ಗದ್ದಲದಲ್ಲಿ ಹೊಸಬನೇನಾದರೂ ಸಿಕ್ಕರೆ ಅಪ್ಪಚ್ಚಿ ಆಗಿ ಹೋಗಿ ಬಿಡುತ್ತಾನೆ.

ಇಲ್ಲಿ ನೊಡಲಿರುವ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯ ಕಂಡು ಬರುತ್ತಿದೆ. ಟ್ರೈನ್ ಪ್ಲಾಟ್ ಫಾರ್ಮ್ ಗೆ ಬರುತ್ತಿದ್ದಂತೆಯೇ ಪ್ರವಾಸಿಗರು ಒಳಗೆ ಏರಲು ಮುಗಿ ಬಿದ್ದಿದ್ದಾರೆ. ಎಲ್ಲರೂ ಒತ್ತಟ್ಟಿಗೆ ಬಂದಾಗ ಯಾವ ದೃಶ್ಯ ನಿರ್ಮಾಣವಾಗಿದೆ ಒಮ್ಮೆ ನೋಡಿ. ಒಬ್ಬ ತುಂಬಾ ಶಕ್ತಿಯನ್ನು ಒಗ್ಗೂಡಿಸಿ ಒಳಗೆ ಹೋಗಲು ಯತ್ನಿಸಿದಾಗ ಆತನ ಜೊತೆಗೆ ಏನು ನಡೆದಿದೆ ಎಂಬುದನ್ನು ಸ್ವತಃ ವಿಡಿಯೋದ ದೃಶ್ಯದಲ್ಲಿಯೇ ನೋಡಿ ಗೊತ್ತಾಗುತ್ತೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Deep (@deeep6632)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ deeep6632 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಜನರನ್ನು ರಂಜಿಸಿದ್ದರೆ ಸಾವಿರಾರು ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.