OMG! ನೀರಿನಲ್ಲಿ ಜೀವಂತ ಹಾವನ್ನು ತಿನ್ನುತ್ತಿರುವ ಆಮೆ! ಆಮೆಯ ಇನ್ನೊಂದು ಮುಖ ನೋಡಿ ಶಾಕ್ ಆದ ನೆಟ್ಟಿಗರು! Viral Video

ಪ್ರಕೃತಿಯಲ್ಲಿ ಎಷ್ಟು ಸೌಂದರ್ಯ ತುಂಬಿದೆಯೋ ಅಷ್ಟೇ ಭೀ” ಕರತೆಯು ತುಂಬಿದೆ ಎಂಬುದು ಕೂಡಾ ಒಪ್ಪಲೇಬೇಕಾದ ಸತ್ಯ‌. ಆದರೆ ಸೌಂದರ್ಯ, ಶಾಂತ ಚಿತ್ತವಾಗಿರುವ ದೃಶ್ಯಗಳು ಹಾಗೂ ಆಹ್ಲಾದಕರ ವಾತಾವರಣವನ್ನು ಸದಾ ನೋಡುವ ಕಣ್ಣಿಗೆ ಪರಿಸರದಲ್ಲಿನ ಕೆಲವು ವಿಚಾರಗಳು ಮಾತ್ರ ಮೈ ನವಿರೇಳುವಂತೆ ಮಾಡುತ್ತದೆ. ಕೆಲವೊಂದು ದೃಶ್ಯಗಳು ರೋಮಾಂಚನವನ್ನು ಉಂಟು ಮಾಡುತ್ತದೆ. ಕೆಲವು ಸನ್ನಿವೇಶಗಳು ನಂಬಲು ಅಸಾಧ್ಯ ಎಂತಲೂ ಕೂಡಾ ನಾವು ಹೇಳಬಹುದು. ಅದರಲ್ಲೂ ಪ್ರಾಣಿಗಳ ವಿಚಾರ ಬಂದಾಗ ನಮಗೆ ಅವುಗಳ ಪ್ರತಿ ವಿಷಯವೂ ಕೂಡಾ ವಿಶೇಷ ಎನಿಸುತ್ತದೆ. ನಾವು ನೋಡಿರುವ ಪ್ರಾಣಿಗಳ ಇನ್ನೊಂದು ಮುಖ ನಮ್ಮ ಕಣ್ಮುಂದೆ ಬಂದಾಗ ಅಬ್ಬಾ ಇದೇನಿದು ಎನಿಸುವುದು‌. ಸದಾ ಸಾಧುವಂತೆ ಕಂಡ ಜೀವಿಯೊಂದರ ಮೈ ನಡುಗಿಸುವ ರೂಪ ನೋಡಿದಾಗ ಒಂದು ಕ್ಷಣ ನಮ್ಮನ್ನು ನಾವು ನಂಬಲಾಗುವುದಿಲ್ಲ.

ಅಂತಹುದೊಂದು ದೃಶ್ಯ ಇದೀಗ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗ್ತಾ ಇದೆ. ಇಷ್ಟಕ್ಕೂ ಅದ್ರಲ್ಲಿ ಏನಿದೆ ಅನ್ನೋದು ನೋಡಿದರೆ ಒಂದು ಕ್ಷಣ ನಮ್ಮ ಮುಂದೆ ಕೂಡಾ ಪ್ರಕೃತಿಯಲ್ಲಿನ ಇನ್ನೊಂದು ಮುಖದ ಅನಾವರಣ ಆಗುತ್ತದೆ. ಸದಾ ನಮ್ಮ‌ ಮುಂದೆ ಬಹಳ ನಿಶ್ಯಬ್ದವಾಗಿ, ಬಹಳ ಸಾಧುವಾಗಿ, ಅಪಾರ ಎದುರಾದ ಕೂಡಲೇ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ತನ್ನ ಭದ್ರವಾದ ಕೋಟೆಯಂತಹ ಚಿಪ್ಪಿನೊಳಗೆ ಸೇರಿ ಕೊಳ್ಳುವ ಜೀವಿ ಆಮೆ. ನಡಿಗೆಯಲ್ಲಿ ಕೂಡಾ ನಿಧಾನ ಗತಿ, ನೋಟದಲ್ಲೊಂದು ಆಲಸಿತನ, ಆಕಾರದಲ್ಲೊಂದು ಅಮಾಯಕತೆಯು ನಮ್ಮ ಕಣ್ಣ ಮುಂದೆ ಬರುತ್ತದೆ. ಇಂತಹ ಆಮೆಯ ಇನ್ನೊಂದು ಮುಖವನ್ನು ತೋರಿಸುತ್ತಿದೆ ಈ ವೀಡಿಯೋ.‌

ದಿ ಡಾರ್ಕ್ ಸೈಡ್ ಆಫ್ ನೇಚರ್ ಎನ್ನುವ ಟ್ವಿಟರ್ ಖಾತೆಯಲ್ಲಿ ಒಂದು ವೀಡಿಯೋ ವನ್ನು ಆ ಖಾತೆಯ ಬಳಕೆದಾರರು ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 22 ರಂದು ಶೇರ್ ಆಗಿರುವ ಈ ವೀಡಿಯೋವನ್ನು ಈಗಾಗಲೇ ಐದು ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಅನೇಕರು ಅದಕ್ಕೆ ಕಾಮೆಂಟ್ ಗಳನ್ನು ಕೂಡಾ ಮಾಡಿದ್ದಾರೆ. ಇಷ್ಟೊಂದು ಜನ ನೋಡಿರುವ ಈ ವೀಡಿಯೋದಲ್ಲಿ ಏನಿದೆ? ಎಂಬುದಾದರೆ ಅದರಲ್ಲಿ ನೀರಿನಡಿಯಲ್ಲಿ ಒಂದು ಆಮೆ ಇದ್ದು ಅದು ನೀರ ಮೇಲೆ ಸಾಗುತ್ತಿದ್ದ ಒಂದು ನೀರು ಹಾವನ್ನು ಹಿಡಿದುಕೊಂಡಿದೆ. ಆಮೆಯು ಆ ನೀರು ಹಾವನ್ನು ತನ್ನ ಆಹಾರಕ್ಕಾಗಿ ಹಿಡಿದಿದ್ದು, ಹಾವಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

ಆಮೆಯು ಜೀವಂತ ಹಾವನ್ನು ಹಾಗೆ ತಿನ್ನುವ ಪ್ರಯತ್ನವನ್ನು ಮಾಡುತ್ತಿದ್ದು, ಹಾವು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಆದರೆ ಅದರ ಬಾಲದ ಭಾಗವನ್ನು ಬಾಯಲ್ಲಿ ಕಚ್ಚಿ ಹಿಡಿದ ಆಮೆಯು ಹಾವನ್ನು ತಿಂದು ತೇಗಲು ಸಜ್ಜಾಗಿದೆ. ಮಾತ್ರವಲ್ಲದೇ ಅದನ್ನು ತಿನ್ನಲು ಆರಂಭಿಸಿದೆ ಕೂಡಾ. ಹಾವು ನೀರಿನ ಮೇಲೆ ತನ್ನ ತಲೆ ಎತ್ತಿ ನೋಡಿದೆ, ತಪ್ಪಿಸಿಕೊಳ್ಳಲು ಸಾಧ್ಯವಾಗುವ ಯಾವುದಾದರೂ ದಾರಿ ಸಿಗುವುದೇನೋ ಎಂದು ನೋಡುವಂತೆ ಕಾಣುತ್ತಿದೆ. ಆದರೆ ಹಾವಿಗೆ ಆ ಅವಕಾಶವು ಸಿಗದೇ ಅದು ಆ ಆಮೆಯ ಆಹಾರವಾಗಿದೆ. ಒಟ್ಟಾರೆ ಜೀವಂತ ಹಾವನ್ನು ಆಮೆ ತಿನ್ನುವ ಈ ವೀಡಿಯೋ ಭಿನ್ನವಾಗಿದೆ..

ವಿಡಿಯೋ ನೋಡಿ

ವೀಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಹಾವು ಭಯಂಕರ ಇನ್ನು ಆಮೆ ಅದನ್ನು ತಿನ್ನುವುದರಲ್ಲಿ ಏನೂ ಭಯ ಎನಿಸುತ್ತಿಲ್ಲ ಎಂದರೆ, ಒಬ್ಬರು ಭೂಮಿಯ ಮೇಲಿನ ಕೆಟ್ಟ ಆಮೆಯನ್ನು ಇಲ್ಲಿ ನೋಡಬಹುದು ಎಂದಿದ್ದಾರೆ. ಮತ್ತೊಬ್ಬರು ಬಹುಶಃ ಆಮೆ ಹುಲ್ಲು ಎಂದು ತಿಳಿದುಕೊಂಡು ಹಾವನ್ನು ಹಿಡಿದಿರುವ ಹಾಗೆ ಇದೆ ಎಂದು ಕೂಡಾ ಹೇಳಿದ್ದಾರೆ. ವೀಡಿಯೋವನ್ನು ನೋಡಿದವರ ಪ್ರತಿಕ್ರಿಯೆ ಗಳು ಭಿನ್ನ ವಿಭಿನ್ನವಾಗಿವೆ.