ಈ ಫೋಟೋದಲ್ಲಿ ಅಡಗಿಕೊಂಡಿರುವ 9 ಜೀವಿಗಳು ಯಾವವು? ಫೋಟೋ zoom ಮಾಡಿ ನೋಡಿ ಉತ್ತರ ಸಿಗುತ್ತೆ!!!

ಸದ್ಯದ ಕಾಲದಲ್ಲಿ ಅನೇಕ ರೀತಿಯ ವಿಡಿಯೋ ಹಾಗೂ ಫೋಟೋಗಳು ತುಂಬಾನೆ ಚರ್ಚೆಯಲ್ಲಿರುತ್ತವೆ. ಒಮ್ಮೆ ವೈರಲ್ ಆಗಲು ಶುರುವಾದರೆ ಸಾಕು ಅವು ನಿಲ್ಲುವ ಮಾತೇ ಬರಲ್ಲ. ಪ್ರಸ್ತುತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ಫೋಟೋ ನೋಡಿದಾಗ ಮೊದಲಿಗೆ ನಿಮಗೆ ಒಂದು ಜೀವಿ ಕಾಣುತ್ತದೆ. ತದನಂತರ ಬಹಳಷ್ಟು ಜೀವಿಗಳು ಕಾಣುತ್ತವೇ ಒಟ್ಟಾರೆಯಾಗಿ ಇದೊಂದು ಆಪ್ಟಿಕಲ್ ಇಲ್ಯೂಶನ್ ತರಹ ಇದೆ.

ಪ್ರಸ್ತುತ ಫೋಟೋವನ್ನು ಐಎಎಸ್ ಅಧಿಕಾರಿಯಾದ ಸುಶಾಂತ್ ನಂದಾ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಶೇರ್ ಮಾಡುತ್ತಾ. ‘ಈ ಫೋಟೋದಲ್ಲಿ ಒಂಬತ್ತು ಪ್ರಾಣಿಗಳು ಅಡಗಿಕೊಂಡಿವೆ ಅವು ಯಾವವು ಅಂತ ಕಾಮೆಂಟ್ ಮಾಡಿ. ಮೊದಲಿಗೆ ನಿಮಗೆ ಯಾವ ಪ್ರಾಣಿ ಕಾಣುವದೋ ಅದರ ಮೇಲಿಂದ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತೆ’ ಅಂತ ಈ ಫೋಟೋ ಗೆ ಶೀರ್ಷಿಕೆ ನೀಡಿದ್ದಾರೆ. ಸಾಧಾರಣವಾಗಿ ಈ ಫೋಟೋ ನೋಡಿದಾಗ ನಮಗೆಲ್ಲ ಮೊದಲಿಗೆ ಯಾವ ಯಾವ ಪ್ರಾಣಿ ಕಾಣುತ್ತವೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಈ ಪ್ರಸ್ತುತ ಫೋಟೋದಲ್ಲಿ ಒಂದಲ್ಲ ಎರಡಲ್ಲ ಸುಮಾರು ಒಂಬತ್ತು ಜೀವಿಗಳು ಅಡಗಿಕೊಂಡಿವೆ ಹಾಗಾಗಿ ಯಾರಿಗೆ ಯಾವ ಪ್ರಾಣಿ ಮೊದಲಿಗೆ ಕಾಣುತ್ತವೆ ಅಂತ ಹೇಳಲು ಸಾಧ್ಯವಿಲ್ಲ. ನೀವು ಸಹ ಈ ಕೆಳಗಿನ ಫೋಟೋ ಲಕ್ಷಪೂರ್ವಕವಾಗಿ ನೋಡಿ. ಅದರಲ್ಲಿ ಅಡಗಿಕೊಂಡಿರುವ ಒಂಬತ್ತು ಪ್ರಾಣಿಗಳು ಯಾವವು ಅಂತ ಕಾಮೆಂಟ್ ಮಾಡಿ.

ಒಂದು ವೇಳೆ ಫೋಟೋದಲ್ಲಿ ಅಡಗಿಕೊಂಡಿರುವ ಒಂಬತ್ತು ಪ್ರಾಣಿಗಳು ಹುಡುಕುವಲ್ಲಿ ನೀವು ಯಶಸ್ಸು ಕಂಡರೆ ನೀವು ತುಂಬಾ ಬುದ್ಧಿವಂತರು ಹಾಗೂ ಸೂಕ್ಷ್ಮ ದೃಷ್ಟಿಯುಳ್ಳವರು ಅಂತ ಅರ್ಥ. ಒಂದು ವೇಳೆ ನಿಮಗೆ ಒಂಬತ್ತು ಪ್ರಾಣಿಗಳು ಹುಡುಕುವಲ್ಲಿ ಸಾಧ್ಯವಾಗದೇ ಇದ್ದರೆ ಸಂಕೋಚ ಪಡಬೇಡಿ. ನಿಮಗಾಗಿ ನಾವು ಈ ಫೋಟೊದಲ್ಲಿ ಅಡಗಿಕೊಂಡಿರುವ ಒಂಬತ್ತು ಪ್ರಾಣಿಗಳ ಹೆಸರುಗಳನ್ನು ತಿಳಿಸುತ್ತೇವೆ ಬೇಕಾದರೆ ನೀವು ತಾಳೆ ಹಾಕಿ ನೋಡಬಹುದು. ಪ್ರಸ್ತುತ ಫೋಟೋ ದಲ್ಲಿ ತೋಳ, ಚಿರತೆ, ಮೀನು, ಹಾವು, ಮಿಡತೆ, ಏಡಿ, ಮೊಲ, ಕುದುರೆ ಮತ್ತು ಚಿಟ್ಟೆ ಇವೆ ಲಕ್ಷಪೂರ್ವಕವಾಗಿ ನೋಡಿ ಕಾಣಿಸುತ್ತವೆ.