ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಟೆರೆಸ್ ಟ್ಯಾಂಕ್ ನಲ್ಲಿ ಮನಸೋ ಇಚ್ಛೆ ಮುಳುಮುಳುಗೆದ್ದು ಮಸ್ತಿ ಮಾಡುತ್ತಿದ್ದ ಮಂಗಗಳ ಚಿಲ್ಡ್ ವಿಡಿಯೋ ವೈರಲ್!

ಸದ್ಯ ದಿನದಿಂದ ದಿನಕ್ಕೆ ಟೆಂಪರೇಚರ್ ನಲ್ಲಿ ತುಂಬಾ ಹೆಚ್ಚಳ ಕಂಡುಬರುತ್ತಿದೆ. ಇದರಿಂದಾಗಿ ಮನುಷ್ಯರ ಜೊತೆಗೆ ಪ್ರಾಣಿಗಳು ಸಹ ಬಿಸಿಲಿನ ಬೇಗೆಗೆ ಬೇಸತ್ತು ಹೋಗಿವೆ. ನಿಮ್ಮ ಮನೆಯ ಮಾಳಿಗೆಯ ಮೇಲೆ ನೀರಿನ ಟ್ಯಾಂಕ್ ಗಳು ಇದ್ದರೆ ಅವುಗಳ ಮೇಲಿನ ಮುಚ್ಚಳ ಸರಿಯಾಗಿದೆಯೋ ಇಲ್ಲವೋ ಮೊದಲು ಒಮ್ಮೆ ಸರಿಯಾಗಿ ಚೆಕ್ ಮಾಡಿ. ಇಲ್ಲವಾದರೆ ಇಲ್ಲಿ ನೋಡುವ ದೃಶ್ಯ ನಿಮ್ಮ ಟೆರೆಸ್ ಮೇಲೆ ಇಟ್ಟಿರುವ ಟ್ಯಾಂಕಿನಲ್ಲಿ ಕಂಡುಬರಬಹುದು. ಸದ್ಯ ಮಂಗಗಳ ನೀರಿನಲ್ಲಿ ಚೆಲ್ಲಾಟವಾಡುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಮಂಗಗಳ ಈ ಬಿಂದಾಸ್ ಮಸ್ತಿಯ ವಿಡಿಯೋ ನೋಡಿದಾಗ ನೀವು ನಿಮ್ಮ ಬೇಸಿಗೆಯ ಸೆಕೆಯನ್ನೇ ಮರೆತುಬಿಡುವಿರಿ.

ಪ್ರಸ್ತುತ ವಿಡಿಯೋದಲ್ಲಿ ಮಂಗಗಳು ಟೆರೇಸ್ ಮೇಲೆ ಇಟ್ಟಿರುವ ಟ್ಯಾಂಕ್ ನಲ್ಲಿ ಮುಳುಮುಳುಗಿ ಬಿಂದಾಸ್ ಆಗಿ ಮಸ್ತಿ ಮಾಡುತ್ತಿವೆ. ಇವುಗಳು ನೀರಿನಲ್ಲಿ ಇಳಿದು ಮಾಸ್ತಿ ಮಾಡುವ ದೃಶ್ಯ ನೋಡಿದರೆ ನಿಜಕ್ಕೂ ಬಿಸಿಲಿನಿಂದ ಪರಿತಪಿಸಿದ ಹಾಗೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ಹೀಗಾಗಿ ಯಾರ ಭಯವಿಲ್ಲದೆ ತಮ್ಮದೇ ಮಸ್ತಿಯಲ್ಲಿ ಟ್ಯಾಂಕ್ ನಲ್ಲಿ ಮುಳುಗಿ ಮುಳುಗಿ ಏಳುತ್ತಿವೆ. ಬಿಸಿಲಿನ ಬೇಗೆಗೆ ಮಂಗಗಳು ಸಹ ಬೇಸತ್ತಿವೆ ಎಂಬುದು ಈ ವಿಡಿಯೋ ನೋಡಿದಾಗ ತಿಳಿದು ಬರುತ್ತಿವೆ.

ಎಲ್ಲ ಕಡೆಗೂ ದೊಡ್ಡ ಪ್ರಮಾಣದಲ್ಲಿ ಗಿಡ ಮರಗಳನ್ನು ಕಡೆಯಲಾಗುತ್ತಿದೆ, ಜೊತೆಗೆ ಕಾಡಿನಲ್ಲಿ ನೀರಿನ ಕೊರತೆ ಎಲ್ಲೆಡೆಯೂ ಕಂಡು ಬರುತ್ತಿದೆ. ಈ ಎಲ್ಲ ಕಾರಣದಿಂದ ಪ್ರಾಣಿಗಳು ಕಾಡನ್ನು ಬಿಟ್ಟು ಊರು ಮತ್ತು ಪಟ್ಟಣಗಳ ಕಡೆಗೆ ವಲಸೆ ಬರುತ್ತಿವೆ. ಬೇಸಿಗೆಯಲ್ಲಿ ಎಲ್ಲೆಲ್ಲಿ ನೀರು ಕಂಡು ಬರುತ್ತದೆ ಅಲ್ಲಲ್ಲಿ ಪ್ರಾಣಿಗಳು ಪಕ್ಷಿಗಳು ನೀರು ಕುಡಿಯಲು ಬರುತ್ತವೆ. ಅದಕ್ಕಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗಾಗಿ ಕುಡಿಯಲಿಕ್ಕೆ ಏನಾದರೂ ನೀರಿನ ವ್ಯವಸ್ಥೆ ಮಾಡಿ ಎಂದು ಕರೆ ನೀಡಲಾಗುತ್ತಿದೆ. ಜೊತೆಗೆ ಟೆರೆಸ್ ಮೇಲೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಟ್ಯಾಂಕ್ ಗಳನ್ನು ಅಳವಡಿಸಿದ್ದರೆ ಅವುಗಳ ಮೇಲಿನ ಮುಚ್ಚಳ ಸರಿಯಾಗಿ ಮುಚ್ಚಿದೆಯೋ ಅಥವಾ ಇಲ್ಲ ಪರೀಕ್ಷಿಸಿ ಯೋಗ್ಯ ಕಾಳಜಿ ತೆಗೆದುಕೊಳ್ಳಿ. ಹಾಗೂ ಇನ್ನಿತರ ಜೀವರಾಶಿಗಳಿಗೂ ಕೈಲಾದಷ್ಟು ಕುಡಿಯಲು ನೀರಿನ ವ್ಯವಸ್ಥೆ ಮಾಡಿದರೆ ತುಂಬಾ ಒಳ್ಳೆಯದು.

ವಿಡಿಯೋ ನೋಡಿ