ಹೊಟ್ಟೆಯ ಪಾಡಿಗೆ ನಾಯಿ ಮಾಡಿತು ಜಬರ್ದಸ್ತ್ ಆಕ್ಟ್! ವಿಡಿಯೋ ನೋಡಿ ಮನುಷ್ಯರ ಗುಣ ಪಕ್ಕಾ ನಾಯಿಯಲ್ಲಿವೆ ಎನ್ನುವಿರಿ.

ನಾಯಿ ಅನಾದಿ ಕಾಲದಿಂದಲೂ ಮನುಷ್ಯನ ಜೊತೆಗೆ ಮಿತ್ರನಾದ ನಡೆದುಕೊಂಡು ಬಂದಿದೆ. ಸಾಕು ಪ್ರಾಣಿಗಳಲ್ಲಿ ನಾಯಿಗೆ ಮೊದಲ ಆದ್ಯತೆ ನೀಡಲಾಗಿದೆ. ಇದು ಮನುಷ್ಯನ ವಿಶ್ವಾಸ ಮತ್ತು ನಂಬಿಕೆಗೆ ಪಾತ್ರವಾದ ಮುದ್ದಿನ ಪ್ರಾಣಿಯಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಾಯಿಯು ಮಾಡಿದ ಆಕ್ಟಿಂಗ್ ನ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ ತಲೆ ಚಚ್ಚಿಕೊಳ್ಳುವದೊಂದೇ ಬಾಕಿ ಇದೆ ಎನ್ನುತ್ತೀರಿ. ಪ್ರಾಣಿಗಳು ತಮ್ಮ ಹೊಟ್ಟೆಯ ಪಾಡಿಗಾಗಿ ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತವೆ. ಆದರೆ ಈ ನಾಯಿಯು ಮಾಡಿದ ಜುಗಾಡ್ ನೋಡಿದಾಗ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ.

ಪ್ರಸ್ತುತ ವಿಡಿಯೋದಲ್ಲಿ ಒಂದು ನಾಯಿಯು ಕ್ಯಾಮೆರಾ ಮ್ಯಾನ್ ಕಡೆಗೆ ಕುಂಟುತ್ತ ಕುಂಟುತ್ತ ಬರುತ್ತಿದೆ. ಅದನ್ನು ನೋಡಿದಾಗ ಯಾರಿಗಾದರೂ ಮರುಕ ಹುಟ್ಟುತ್ತದೆ. ಮರುಕ್ಷಣವೇ ಅಲ್ಲಿಯ ದೃಶ್ಯ ನೋಡಿ ಶಾಕ್ ಆಗುತ್ತದೆ. ಕಾರಣ ನಾಯಿಯು ತನ್ನ ಅನ್ನವನ್ನು ಪಡೆದ ತಕ್ಷಣವೇ ಅದನ್ನು ಬಾಯಿಯಲ್ಲಿ ಹಿಡಿದು ತುಂಬಾ ಸಲೀಸಾಗಿ ತನ್ನ ಕಾಲಿಗೆ ಏನೂ ಆಗಿಲ್ಲವೆಂಬಂತೆ ಸಹಜವಾಗಿ ನಡೆದುಕೊಂಡು ಹೋಗುತ್ತದೆ. ಇದನ್ನು ನೋಡಿದಾಗ ಬಿದ್ದು ಬಿದ್ದು ನಗುವದೊಂದೇ ಬಾಕಿ. ಈ ರೀತಿಯ ನಾಟಕ ಮನುಷ್ಯರೇ ಮಾಡುತ್ತಾರೆಂದರೆ ಈಗ ಪ್ರಾಣಿಗಳು ಸಹ ಅದರಲ್ಲೂ ನಂಬಿಕೆಗೆ ಪಾತ್ರವಾದ ನಾಯಿಯೂ ಹೀಗೆ ಮಾಡಿದರೆ ಇನ್ನು ವಿಶ್ವಾಸವಿಡುವುದು ಯಾರ ಮೇಲೆ ಎಂಬ ಪ್ರಶ್ನೆ ಹುಟ್ಟುತ್ತದೆ, ಅಲ್ವಾ?

ವಿಡಿಯೋ ನೋಡಿ

ಪ್ರಸ್ತುತ ಈ ನಾಯಿಯ ನಾಟಕದ ವಿಡಿಯೋ ಟ್ವಿಟರ್ ನಲ್ಲಿ @TansuYegen ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 31 ಲಕ್ಷಕ್ಕೂ ಮೇಲ್ಪಟ್ಟು ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 85 ಸಾವಿರಕ್ಕೂ ಹೆಚ್ಚು ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.