ಈ ಕಾಡು ಪ್ರಾಣಿಗಳ ಫೋಟೋದಲ್ಲಿ ಚಿರತೆ ಯಾವುದು? ಮತ್ತು ಜಾಗ್ವಾರ್ ಯಾವುದು? ವ್ಯತ್ಯಾಸ ಗುರುತಿಸಿ ಹೇಳಲು ಸಾಧ್ಯವೇ?

ಎಷ್ಟೋ ಸಲ ನಾವು ಕೆಲವು ವಸ್ತುಗಳು ಅಥವಾ ಪ್ರಾಣಿಗಳು ಒಂದೇ ರೀತಿ ಇರುತ್ತವೆ ಎಂಬಂತೆ ಗ್ರಹಿಸಿಕೊಳ್ಳುತ್ತೇವೆ. ಅವುಗಳಲ್ಲಿ ಅನೇಕ ಸಮಾನತೆಗಳು ಕಂಡು ಬರುವದರಿಂದ ನಿಶ್ಚಿತವಾಗಿ ಇಲ್ಲಿ ನಮ್ಮ ಕಣ್ಣುಗಳು ಮೋಸಗೊಳ್ಳುತ್ತವೆ.

ಪ್ರಸ್ತುತ ಈ ಚಿತ್ರದಲ್ಲಿ ಎರಡು ಬೇರೆಬೇರೆ ಪ್ರಾಣಿಗಳು ಕಂಡು ಬರುತ್ತಿವೆ. ಈ ಎರಡು ಪ್ರಾಣಿಗಳಲ್ಲಿ ಸಾಕಷ್ಟು ಸಮಾನತೆ ಅಥವಾ ಸಾಮ್ಯತೆಗಳು ಕಂಡು ಬರುತ್ತವೆ. ಹೀಗಾಗಿ ಇದು ಯಾವ ಪ್ರಾಣಿ ಎಂಬುದು ತಿಳಿದು ಬರುವದಿಲ್ಲ, ಅಷ್ಟೇ ಏಕೆ ಎರಡು ಬೇರೆ ಬೇರೆ ಪ್ರಾಣಿಗಳಾಗಿದ್ದರೂ ಎರಡಕ್ಕೂ ಒಂದೇ ಹೆಸರನ್ನು ಕೊಡುತ್ತೇವೆ.

ಈಗ IFS ಆಫೀಸರ್ ಆದ ಪ್ರವೀಣ ಕಾಸವಾನ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಎರಡು ಕಾಡು ಪ್ರಾಣಿಗಳು ಕಂಡು ಬರುತ್ತಿವೆ. ಅದರಲ್ಲಿ ಒಂದು ಜಾಗ್ವಾರ್ ಇನ್ನೊಂದು ಚಿರತೆ ಇದೆ. ಕ್ಯಾಪ್ಶನ್ ನಲ್ಲಿ ಈ ಎರಡು ಪ್ರಾಣಿಗಳಲ್ಲಿ ಏನು ವ್ಯತ್ಯಾಸವಿದೆ ಎಂದು ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ಈ ಫೋಟೋ ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತ ಮಾಡುತ್ತಾ ಇವೆರಡರಲ್ಲಿ ವ್ಯತ್ಯಾಸ ಕಂಡು ಹಿಡಿಯುವುದು ತುಂಬಾ ಕಷ್ಟ ಎಂದಿದ್ದಾರೆ. ಯಾಕೆಂದರೆ ಎರಡರಲ್ಲಿ ಸಾಕಷ್ಟು ಸಾಮ್ಯತೆಗಳಿವೆ.

ನೋಡಿ ಈ ಫೋಟೋ…

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ನೆಟ್ಟಿಗರ ತಲೆ ತಿನ್ನುತ್ತಿದೆ. ತನ್ನ ಪ್ರತಿಕ್ರಿಯೆಯಲ್ಲಿ ಒಬ್ಬ ಯೂಸರ್ ಈ ಫೋಟೋದಲ್ಲಿ ನೋಡಿ ಎರಡು ಪ್ರಾಣಿಗಳನ್ನು ಗುರುತಿಸುವುದು ತುಂಬಾ ಕಷ್ಟವೆಂದರೆ, ಇನ್ನೊಬ್ಬ ಉತ್ತರ ಶೋಧಿಸಲು ಸಾಧ್ಯವಾಗದೆ ತಮಾಷೆಯಿಂದ ನನಗೆ ಗೊತ್ತು ಇಲ್ಲಿ ಒಂದು ಚಿರತೆ ಮತ್ತು ಇನ್ನೊಂದು ಜಾಗ್ವಾರ್ ಇದ್ದೇ ಇದೆ ಎಂದಿದ್ದಾನೆ. ಇನ್ನೊಬ್ಬ ಯೂಸರ್, ಸರ್ ಈ ಪ್ರಶ್ನೆಯ ಉತ್ತರ ನೀವೇ ಹೇಳಬಹುದು ಎಂದು ಶೇರ್ ಮಾಡಿದ IFS ಆಫೀಸರ್ ಆದ ಪ್ರವೀಣ ಕಾಸವಾನ್ ಅವರಿಗೆ ಮರುಪ್ರಶ್ನೆ ಹಾಕಿದ್ದಾನೆ.

ನಿಮ್ಮ ಮಾಹಿತಿಗಾಗಿ 1ನೆಯ ನಂಬರ್ ಪ್ರಾಣಿ ಫೋಟೋದಲ್ಲಿ ಇದಕ್ಕೆ ಜಾಗ್ವಾರ್ ಇದ್ದು 2 ನೆಯ ನಂಬರ್ ಪ್ರಾಣಿ ಬಲಕ್ಕೆ ಚಿರತೆಯಾಗಿದೆ.