Articles

VIDEO : ಕಾರಿಗೆ ‘ಕೋವಿಡ್ ಡ್ಯೂಟಿ’ ಬೋರ್ಡ್ ಅಂಟಿಸಿಕೊಂಡು ಹೊರಟಿದ್ದರು, ಕಾರನ್ನು ತಡೆದ ಪೊಲೀಸರಿಗೆ ಕಾದಿತ್ತು ಶಾಕ್!

ಒಂದು ಕಡೆ ಎಲ್ಲರೂ ನಿರಂತರವಾಗಿ ಸರಕಾರವನ್ನು – ಪೊಲೀಸರನ್ನು ಬೈಯ್ಯುತ್ತಲೇ ಇದ್ದಾರೆ. ಮತ್ತೊಂದು ಕಡೆ ಸಾಧ್ಯವಾದಷ್ಟು ಕೊರೊನವನ್ನು ಹರಡಲು ಬೇಕಾಬಿಟ್ಟಿ ತಿರುಗುತ್ತಿದ್ದಾರೆ. ಲಾಕ್ ಡೌನ್ ಮಾಡಿರುವುದು ಯಾಕೆ ಎಂಬುದನ್ನೂ ಮರೆತು, ಏನೋ ಪೊಲೀಸರು ತಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೇನೋ ಎಂಬಂತೆ ಜನ ವರ್ತಿಸುತ್ತಿದ್ದಾರೆ.

ಅದರಲ್ಲೂ ಕಲಿತ ಸುಶಿಕ್ಷಿತ ಮಹಾಜನಗಳೇ ಇಂಥ ಕೆಲಸ ಮಾಡುತ್ತಿರುವುದು, ಅದಕ್ಕೆ ತಾಜಾ ಉದಾಹರಣೆ, ಕೆಳಗಿನ ವಿಡಿಯೊ. ಕಾರಿನ ಮೇಲೆ URGENT COVID DUTY ಎಂದು ಬೋರ್ಡ್ ಅಂಟಿಸಿಕೊಂಡು ಹೊರಟಿದ್ದ ಕೆಲವರು ವಿಜಯಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಾಸ್ತವದಲ್ಲಿ ಇದರೊಳಗೆ ಇದ್ದಿದ್ದು ಅರ್ಚಕರು!

ಸಾಕಷ್ಟು ಓದಿಕೊಂಡ ಈ ಜ್ಞಾನಿಗಳು ನಕಲಿ ಬೋರ್ಡ್ ಅಂಟಿಸಿಕೊಂಡು ಜನರ ಹಿತಕ್ಕಾಗಿ ಮಾಡಿದ ಕೊರೊನ ನಿಯಮಗಳನ್ನು ಗಾಳಿಗೆ ತೂರಿ ಹೊರಟಿರುವುದು ನಾಚಿಕೆಗೇಡು. ನೋಡಿದವರೆಲ್ಲ ಕೊರೋನ ಡ್ಯೂಟಿಗೆ ಹೊರಟಿರುವ ವಾರಿಯರ್ಸ್ ಇರಬಹುದೇನೋ ಎಂದುಕೊಂಡು ಸುಮ್ಮನಿರಬಹುದು ಅಂತ ಇವರು ಈಪಾಟಿ ತಲೆ ಓಡಿಸಿದ್ದಾರೆ.

ವಿಜಯಪುರದ ಮಹಾತ್ಮಗಾಂಧಿ ಸರ್ಕಲ್ ನಲ್ಲಿ ಸಿಕ್ಕಿಬಿದ್ದ ಇವರನ್ನು ಕೆಳಗಿಳಿಸಿ ಕಾರ್ ಸೀಜ್ ಮಾಡಲಾಗಿದೆ. ಮೊದಲು ಕೋರೊನ ಡ್ಯೂಟಿ ಸಿಬ್ಬಂದಿ ಇರಬಹುದು ಎಂದುಕೊಂಡು ಪೊಲೀಸರು ಬದಿಗೆ ಸರಿದಿದ್ದರು, ನಂತರ ಕಾರಿನಲ್ಲಿ ಅರ್ಚಕರು ಕಾಣಿಸಿದಾಗ ನಿಲ್ಲಿಸಿದ್ದಾರೆ.

ಇಲ್ಲಿ ಬರೀ ಕಾರ್ ಸೀಜ್ ಮಾಡಿರುವುದು ತಪ್ಪು, ಜನರ ಜೀವದ ಜೊತೆ ಚೆಲ್ಲಾಟ ಆಡುವ ಅಂತವರ ಮೇಲೆ ಐಪಿಸಿ ಪ್ರಕಾರ ಕೇಸ್ ದಾಖಲಿಸಬೇಕು. ಸರ್ಕಾರ – ಪೊಲೀಸರು ಜನರ ಓಡಾಟ ತಡೆದು ಕೊರೊನ ನಿಯಂತ್ರಿಸಲು ಪರದಾಡುತ್ತಿದ್ದರೆ ಈ ಅರ್ಚಕರು ಅದೇನು ಲೋಕಕಲ್ಯಾಣ ಮಾಡಲು ಹೀಗೆ ಹೊರಟಿದ್ದರೋ ಗೊತ್ತಿಲ್ಲ. ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.
-Team Infotrend

Leave a Comment

Your email address will not be published. Required fields are marked *